ಐಪಿಎಲ್ 2021: ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ 2 ರನ್ ಗಳ ರೋಚಕ ಜಯ
ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ 2 ರನ್ ಗಳ ರೋಚಕ ಜಯ ಸಾಧಿಸಿದೆ.
Published: 22nd September 2021 12:22 AM | Last Updated: 22nd September 2021 12:22 AM | A+A A-

ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ 2 ರನ್ ಗಳ ರೋಚಕ ಜಯ
ದುಬೈ: ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ 2 ರನ್ ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿ ರಾಜಸ್ಥಾನ ನೀಡಿದ 186 ರನ್ಗಳ ಕಠಿಣ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಕೇವಲ 2 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.
WHAT. A. WIN!
— IndianPremierLeague (@IPL) September 21, 2021
Simply stunning how @rajasthanroyals have pulled off a two-run victory from the jaws of defeat.
Scorecard https://t.co/odSnFtwBAF #VIVOIPL #PBKSvRR pic.twitter.com/16m71yzAOW
ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ (49 ರನ್), ಮಯಾಂಕ್ ಅಗರ್ವಾಲ್ (67 ರನ್), ನಿಕೋಲಸ್ ಪೂರನ್ (32 ರನ್) ಪಂಜಾಬ್ ಗೆಲುವಿಗಾಗಿ ಹರಸಾಹಸ ಪಟ್ಟರು. ಆದರೆ ಅಂತಿಮ ಹಂತದಲ್ಲಿ ದೀಪಕ್ ಹೂಡ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಪಂಜಾಬ್ ಕೇವಲ 2 ರನ್ ಗಳ ವಿರೋಚಿತ ಸೋಲು ಕಂಡಿತು.