ಏಕ ಕಾಲದಲ್ಲಿ ನಡೆಯಲಿವೆ ಐಪಿಎಲ್-2021 ಲೀಗ್ ನ ಕೊನೆಯ ಎರಡು ಪಂದ್ಯಗಳು: ಬಿಸಿಸಿಐ

ಈಗ ನಡೆಯುತ್ತಿರುವ ಐಪಿಎಲ್-2021 ಲೀಗ್ ನ ಕೊನೆಯ ಎರಡು ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ ಎಂದು ಬಿಸಿಸಿಐ ಸೆ.28 ರಂದು ಘೋಷಿಸಿದೆ.
ಐಪಿಎಲ್-2021
ಐಪಿಎಲ್-2021

ಈಗ ನಡೆಯುತ್ತಿರುವ ಐಪಿಎಲ್-2021 ಲೀಗ್ ನ ಕೊನೆಯ ಎರಡು ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ ಎಂದು ಬಿಸಿಸಿಐ ಸೆ.28 ರಂದು ಘೋಷಿಸಿದೆ.

ಇದೇ ಮೊದಲ ಬಾರಿಗೆ ಐಪಿಎಲ್ ನ ಗ್ರೂಪ್ ಫೇಸ್ ನಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 2 ಪಂದ್ಯಗಳು ನಡೆಯುತ್ತಿವೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ನಿಗದಿಯಾಗಿದ್ದರ ಪ್ರಕಾರ ಹೈದರಾಬಾದ್ ಸನ್ ರೈಸರ್ಸ್-ಮುಂಬೈ ಇಂಡಿಯನ್ಸ್ ಪಂದ್ಯ ಮಧ್ಯಾಹ್ನ 3:30 ಕ್ಕೆ ನಡೆಯಬೇಕಿತ್ತು. ಅದೇ ದಿನದಂದು ಆರ್ ಸಿಬಿ-ದೆಹಲಿ ಕ್ಯಾಪಿಟಲ್ ಗಳ ನಡುವಿನ ಪಂದ್ಯ ಸಂಜೆ 7:30 ಕ್ಕೆ ನಡೆಯಬೇಕಿತ್ತು. ಈಗ ಬದಲಾದ ವೇಳಾಪಟ್ಟಿಯಲ್ಲಿ ಎರಡೂ ಪಂದ್ಯಗಳುಪ್ ಸಂಜೆ 7:30 ಕ್ಕೆ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. 

ವಿವೋ ಐಪಿಎಲ್-2021 ಪ್ಲೇ ಆಫ್ ಗಿಂತಲೂ ಮುನ್ನ 2 ಪಂದ್ಯಗಳನ್ನು ಏಕ ಕಾಲದಲ್ಲಿ ನಡೆಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಲೀಗ್ ಹಂತದ ಕೊನೆಯ ದಿನ 08.10.2021 ರಂದು ಮಧ್ಯಾಹ್ನ ಹಾಗೂ ಸಂಜೆ ಪಂದ್ಯ ಆಯೋಜಿಸುವ ಬದಲು ಏಕ ಕಾಲದಲ್ಲಿ ಪಂದ್ಯ ಆಯೋಜನೆ ಮಾಡಲಾಗುತ್ತದೆ ಹಾಗೂ ಸಂಜೆ 7:30 ಐಎಸ್ ಟಿ ( ಸಂಜೆ 6.00 ಜಿಎಸ್ ಟಿ) ಯಲ್ಲಿ ಬಿಸಿಸಿಐ ತಿಳಿಸಿದೆ.

ಈ ವರೆಗೂ ಯಾವುದೇ ತಂಡ ಪ್ಲೇ-ಆಫ್ಸ್ ನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳದ ಕಾರಣ ಈ ಟೂರ್ನಮೆಂಟ್ ನಿರ್ಣಾಯಕ ಹಂತದಲ್ಲಿರಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇ ಆಫ್ಸ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಪಡೆಯುವ   ಅವಕಾಶವಿತ್ತಾದರೂ ಕೋಲ್ಕತ್ತ ವಿರುದ್ಧದ ಸೋಲಿನಿಂದ ಅದು ಸಾಧ್ಯವಾಗಲಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್ ಗೆ ಆಯ್ಕೆಯಾಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com