
ಎಂಎಸ್ ಧೋನಿ
ಮುಂಬೈ: ಐಪಿಎಲ್ 2022ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 54 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಇಂದು ನಡೆದ 11ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿತ್ತು. ಪಂಜಾಬ್ ನೀಡಿದ 181 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ 126 ರನ್ ಗಳಿಗೆ ಆಲೌಟ್ ಆಗಿದೆ.
ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ 33, ಲಿವಿಂಗ್ಸ್ ಸ್ಟೋನ್ 60, ಜಿತೇಶ್ ಶರ್ಮಾ 26 ಕಾಗಿಸೋ ರಬಾಡ ಅಜೇಯ 12 ರನ್ ಗಳಿಸಿದ್ದಾರೆ.
ಚೆನ್ನೈ ಪರ ರಾಬಿನ್ ಉತ್ತಪ್ಪ 13, ಶಿವಂ ದುಬೆ 57 ಮತ್ತು ಎಂಎಸ್ ಧೋನಿ 23 ರನ್ ಗಳಿಸಿದ್ದಾರೆ.
ಚೆನ್ನೈ ತಂಡವನ್ನು ಎಂಎಸ್ ಧೋನಿ ಬದಲಿಗೆ ರವೀಂದ್ರ ಜಡೇಜಾ ಮುನ್ನಡೆಸುತ್ತಿದ್ದು ಆಡಿರುವ 3 ಪಂದ್ಯಗಳಲ್ಲೂ ಸೋಲು ಅನುಭವಿಸಿದೆ.