ಐಪಿಎಲ್ 2022: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲುವು ತಂದುಕೊಟ್ಟ ರಾಹುಲ್!
ಐಪಿಎಲ್ 2022ರ 16ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
Published: 09th April 2022 01:33 AM | Last Updated: 09th April 2022 01:33 AM | A+A A-

ಗುಜರಾತ್ ಟೈಟಾನ್ಸ್
ಮುಂಬೈ: ಐಪಿಎಲ್ 2022ರ 16ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಪೇರಿಸಿತ್ತು. 190 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಗೆ ಶುಭಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. 96 ರನ್ ಬಾರಿಸುವ ಮೂಲಕ ಗಿಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇನ್ನು ಟೈಟಾನ್ಸ್ ಪರ ರಾಹುಲ್ ತೇವಾಟಿಯ ಕೊನೆಯ ಎರಡು ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಅಮೋಘ ಜಯ ತಂದಕೊಟ್ಟರು. ರಾಹುಲ್ ತೇವಾಟಿಯ 3 ಎಸೆತದಲ್ಲಿ ಅಜೇಯ 13 ರನ್ ಬಾರಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ 35, ಲಿವಿಂಗ್ಸ್ಟೋನ್ 64, ಜಿತೇಶ್ ಶರ್ಮಾ 23, ರಾಹುಲ್ ಚಹಾರ್ ಅಜೇಯ 22 ರನ್ ಬಾರಿಸಿದ್ದಾರೆ.
ಗುಜರಾತ್ ಪರ ಶುಭಮನ್ ಗಿಲ್ 96, ಸಾಯಿ ಸುದರ್ಶನ್ 35, ಹಾರ್ದಿಕ್ ಪಾಂಡ್ಯ 27 ರನ್ ಬಾರಿಸಿದ್ದಾರೆ.