ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಆಗಿ ಆಂಡ್ರ್ಯೂ ಮೆಕ್ ಡೊನಾಲ್ಡ್ ನೇಮಕ
ಆಂಡ್ರ್ಯೂ ಮೆಕ್ ಡೊನಾಲ್ಡ್ ಅವರನ್ನು ನಾಲ್ಕು ವರ್ಷಗಳ ಒಪ್ಪಂದದ ಮೇರೆಗೆ ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಡೊನಾಲ್ಡ್ ಅವರನ್ನು ಟೆಸ್ಟ್, ಏಕದಿನ ಮತ್ತು ಟಿ 20 ತಂಡಗಳಿಗೆ...
Published: 13th April 2022 06:18 PM | Last Updated: 13th April 2022 06:18 PM | A+A A-

ಆಂಡ್ರ್ಯೂ ಮೆಕ್ ಡೊನಾಲ್ಡ್
ಮೆಲ್ಬೋರ್ನ್: ಆಂಡ್ರ್ಯೂ ಮೆಕ್ ಡೊನಾಲ್ಡ್ ಅವರನ್ನು ನಾಲ್ಕು ವರ್ಷಗಳ ಒಪ್ಪಂದದ ಮೇರೆಗೆ ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಡೊನಾಲ್ಡ್ ಅವರನ್ನು ಟೆಸ್ಟ್, ಏಕದಿನ ಮತ್ತು ಟಿ 20 ತಂಡಗಳಿಗೆ ತರಬೇತುದಾರರಾಗಿ ನಿಯೋಜಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಪ್ರಕಟಿಸಿದೆ.
ಆಂಡ್ರ್ಯೂ ಅವರು ಅತ್ಯುತ್ತಮ ಮುಖ್ಯ ಕೋಚ್ ಎಂದು ಈಗಾಗಲೇ ತಮ್ಮ ಸಾಮಥ್ರ್ಯ ತೋರಿಸಿದ್ದಾರೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಅವರು ವಿವರಿಸಿದ ದೃಷ್ಟಿಕೋನವು ಪ್ರಭಾವಶಾಲಿ ಮತ್ತು ಉತ್ತೇಜಕವಾಗಿದೆ, ಇದು ನಮ್ಮ ಸ್ಪಷ್ಟ ಆಯ್ಕೆಯಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್ ಹಾಕ್ಲೆ ಹೇಳಿದ್ದಾರೆ.
ಇದನ್ನು ಓದಿ: ಎಂಎಸ್ ಧೋನಿಯಿಂದ ಬಹಳಷ್ಟು ಕಲಿತಿದ್ದೇನೆ, ಅವರು ಅದ್ಭುತ ನಾಯಕ: ಫಾಫ್ ಡುಪ್ಲೆಸಿಸ್
ಪ್ಯಾಟ್ ಕಮಿನ್ಸ್ ಮತ್ತು ಆರನ್ ಫಿಂಚ್ ಅವರ ನಾಯಕತ್ವದಲ್ಲಿ ಪಾಕಿಸ್ತಾನದ ಪ್ರವಾಸದುದ್ದಕ್ಕೂ ತಂಡವು ಆಡಿದ ರೀತಿಗೆ ಮತ್ತು ಗೌರವವನ್ನು ತೋರಿಸಿರುವ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಈದ ಶಾಶ್ವತವಾಗಿ ತರಬೇತುದಾದರಾಗಿ ನೇಮಕವಾಗುತ್ತಿರುವುದು ನಿಜವಾಗಿಯೂ ಸಂತೋಷವಾಗಿದೆ ಎಂದು ಆಂಡ್ರ್ಯೂ ಅವರು ಹೇಳಿದ್ದಾರೆ.
ಇದುವರೆಗಿನ ಪ್ರಯಾಣ ಸಂತೋಷ ತಂದಿದೆ ಮತ್ತು ಮುಂಬರುವ ಅವಧಿಗೆ ಈ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ನನಗೆ ಗೌರವವಿದೆ ಎಂದಿದ್ದಾರೆ.