ಐಪಿಎಲ್ 2022: ತ್ರಿಪಾಠಿ, ಮಾರ್ಕ್ ರಮ್ ಅಬ್ಬರದ ಬ್ಯಾಟಿಂಗ್, ಕೆಕೆಆರ್ ವಿರುದ್ಧ ಸನ್ ರೈಸರ್ಸ್ ಗೆ ಏಳು ವಿಕೆಟ್ ಗೆಲುವು
ಇಲ್ಲಿನ ಬ್ರಾಬೌರ್ನೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ 2022 ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಹಾಗೂ ಮಾರ್ಕ್ ರಮ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಏಳು ವಿಕೆಟ್ ಗಳ ಗೆಲುವು ಸಾಧಿಸಿದೆ.
Published: 16th April 2022 12:02 AM | Last Updated: 16th April 2022 01:20 PM | A+A A-

ರಾಹುಲ್ ತ್ರಿಪಾಠಿ, ಮಾರ್ಕ್ ರಮ್
ಮುಂಬೈ: ಇಲ್ಲಿನ ಬ್ರಾಬೌರ್ನೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ 2022 ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಹಾಗೂ ಮಾರ್ಕ್ ರಮ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಏಳು ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಕೆಕೆಆರ್ ಪರ ನಿತೀಶ್ ರಾಣಾ 54, ಆಂಡ್ರೆ ರಸೆಲ್ 49, ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು. ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ತಂಗರಸು ನಟರಾಜನ್ 3, ಉಮ್ರಾನ್ ಮಲಿಕ್ 2, ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದರು.
ಕೆಕೆಆರ್ ನೀಡಿದ 175 ರನ್ ಗಳ ಗುರಿ ಬೆನ್ನತ್ತಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಪರ ಅಬ್ಪರದ ಬ್ಯಾಟಿಂಗ್ ನಡೆಸಿದ ರಾಹುಲ್ ತ್ರಿಪಾಠಿ 71, ಐಡೆನ್ ಮಾರ್ಕ್ ರಮ್ 68 ,ಕೆನ್ ವಿಲಿಯಮ್ಸ್ 17 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ 2, ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಪಡೆದರು. 37 ಎಸೆತಗಳಲ್ಲಿ 71 ರನ್ ಸಿಡಿಸಿದ ರಾಹುಲ್ ತ್ರಿಪಾಠಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.