ಐಪಿಎಲ್ ನಲ್ಲಿ ಫ್ಲಾಪ್ ಶೋ: ಕೋಪದಲ್ಲಿ ಜಾಹೀರಾತಿಗೆ ಹೊಡೆದ ಇಶಾನ್ ಕಿಶನ್, ವಿಡಿಯೋ ವೈರಲ್!
ಮುಂಬೈ ಇಂಡಿಯನ್ಸ್ ತಂಡದ ಓಪನರ್ ಇಶಾನ್ ಕಿಶನ್ ಗೆ ದಂಡ ವಿಧಿಸುವ ಸಾಧ್ಯತೆ ಇದೆ. ಲಕ್ನೋ ಜೈಂಟ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಫ್ಲಾಪ್ ಆಗಿದ್ದಕ್ಕೆ ಕೋಪಗೊಂಡು ಬೌಂಡರಿ ಲೈನ್ ನಲ್ಲಿದ್ದ ಜಾಹೀರಾತಿಗೆ ಬ್ಯಾಟಿನಿಂದ ಹೊಡೆದಿದ್ದಾರೆ.
Published: 17th April 2022 05:44 PM | Last Updated: 17th April 2022 05:44 PM | A+A A-

ಇಶಾಂತ್ ಕಿಶನ್
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಓಪನರ್ ಇಶಾನ್ ಕಿಶನ್ ಗೆ ದಂಡ ವಿಧಿಸುವ ಸಾಧ್ಯತೆ ಇದೆ. ಲಕ್ನೋ ಜೈಂಟ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಫ್ಲಾಪ್ ಆಗಿದ್ದಕ್ಕೆ ಕೋಪಗೊಂಡು ಬೌಂಡರಿ ಲೈನ್ ನಲ್ಲಿದ್ದ ಜಾಹೀರಾತಿಗೆ ಬ್ಯಾಟಿನಿಂದ ಹೊಡೆದಿದ್ದಾರೆ.
ಕ್ರಿಕೆಟಿಗ ಇಶಾನ್ ಕಿಶನ್ ಗೆ ಈ ಕೋಪ ದುಬಾರಿಯಾಗುವ ಸಾಧ್ಯತೆ ಇದೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ತುಂಬಾನೇ ವೈರಲ್ ಆಗಿದ್ದು, ಬಿಸಿಸಿಐ ಇಶಾನ್ ಕಿಶನ್ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶನಿವಾರ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಮುಂಬೈ ಗೆಲುವಿಗೆ 200 ರನ್ಗಳ ಅಗತ್ಯವಿತ್ತು. ಮುಂಬೈ ಗೆಲುವಿಗೆ ಆರಂಭಿಕ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಉತ್ತಮ ಆರಂಭದ ಅಗತ್ಯವಿತ್ತು.
— Diving Slip (@SlipDiving) April 16, 2022
ರೋಹಿತ್ ಶರ್ಮಾ 7 ಎಸೆತಗಳಲ್ಲಿ 6 ರನ್ ಗಳಿಸಲಷ್ಟೇ ಶಕ್ತರಾದರು. ಆಗ ತಂಡದ ಸ್ಕೋರ್ ಕೇವಲ 16 ರನ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಓಪನರ್ ಇಶಾನ್ ಕಿಶನ್ ಅವರಿಂದ ತಂಡ ಉತ್ತಮ ಇನ್ನಿಂಗ್ಸ್ ನಿರೀಕ್ಷಿ ಮಾಡಿತ್ತು. ಆದರೆ ಅವರು ಕೂಡ ಮಾರ್ಕಸ್ ಸ್ಟೋನಿಸ್ ಎಸೆದ 7ನೇ ಓವರ್ ನಲ್ಲಿ ಔಟಾದರು. 17 ಎಸೆತಗಳಲ್ಲಿ 13 ರನ್ ಗಳಿಸಲಷ್ಟೇ ಇಶಾನ್ ಕಿಶನ್ ಶಕ್ತರಾದರು.
ತಂಡಕ್ಕೆ ಅವಶ್ಯಕತೆ ಇದ್ದಾಗ ಬ್ಯಾಟಿಂಗ್ ನಲ್ಲಿ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದಕ್ಕೆ ಕೋಪಗೊಂಡು ಡಗೌಟ್ಗೆ ಮರಳುವ ವೇಳೆ ಬೌಂಡರಿಯಲ್ಲಿ ಜಾಹೀರಾತು ಹಾಕಿದ್ದ ಲೈನ್ ಗೆ ಬ್ಯಾಟ್ ನಿಂದ ಹೊಡೆದರು. ಇಶಾನ್ ನ ಈ ಕೃತ್ಯಕ್ಕೆ ಆತನಿಗೆ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.