ಕೆ.ಎಲ್. ರಾಹುಲ್- ಆಥಿಯಾ ಶೆಟ್ಟಿ ಶೀಘ್ರವೇ ಒಟ್ಟಿಗೆ ವಾಸ?

ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಮಗಳು ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಾ? ಈ ಪ್ರಶ್ನೆಗೆ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಆಥಿಯಾ ಶೆಟ್ಟಿ...

Published: 22nd April 2022 07:58 PM  |   Last Updated: 22nd April 2022 07:58 PM   |  A+A-


kl-rahul

ಆಥಿಯಾ ಶೆಟ್ಟಿ - ಕೆ.ಎಲ್. ರಾಹುಲ್

Online Desk

ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಮಗಳು ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಾ? ಈ ಪ್ರಶ್ನೆಗೆ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇನ್ನೂ ನೇರವಾದ ಉತ್ತರ ಕೊಟ್ಟಿಲ್ಲ. ಆದರೆ ಶೀಘ್ರದಲ್ಲೇ ಈ ಜೋಡಿಹಕ್ಕಿ ಒಂದೇ ಗೂಡಿನಲ್ಲಿ ವಾಸಿಸಲಿದ್ದಾರೆ. ಇಬ್ಬರೂ ಮುಂಬೈನಲ್ಲಿ ಅಪಾರ್ಟ್ಮೆಂಟ್ ವೊಂದನ್ನು ಬಾಡಿಗೆಗೆ ಪಡೆದಿದ್ದು, ಇಬ್ಬರೂ ಒಂದೇ ಗೂಡು ಸೇರಲಿದ್ದಾರೆ ಎಂಬ ಮಾತು ಜೋರಾಗಿದೆ. 

ಕೆ.ಎಲ್. ರಾಹುಲ್- ಆಥಿಯಾ ಶೆಟ್ಟಿ, ಮುಂಬೈನ ಸಮುದ್ರಕ್ಕೆ ಎದುರಾಗಿರುವ 4 ಬಿಹೆಚ್ ಕೆ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ಐಪಿಎಲ್ 2022: ಶೂನ್ಯಕ್ಕೆ ಕೆಎಲ್ ರಾಹುಲ್ ಔಟ್; ಗುಜರಾತ್ ಟೈಟಾನ್ಸ್ ಗೆ 159 ರನ್ ಗಳ ಗುರಿ ನೀಡಿದ ಲಖನೌ!

ಇಬ್ಬರೂ ಬಾಂದ್ರಾದ ಕಾರ್ಟರ್ ರೋಡ್ ಅಪಾರ್ಟ್‌ಮೆಂಟ್‌ನಲ್ಲಿ ಸಮುದ್ರಾಭಿಮುಖವಾಗಿರುವ 4 ಬಿಹೆಚ್ ಕೆ ಅಪಾರ್ಟ್ಮೆಂಟ್‌ನಲ್ಲಿ ಒಟ್ಟಿಗೆ ವಾಸಿಸಲು ಸಿದ್ಧರಾಗಿದ್ದಾರೆ. ಅಪಾರ್ಟ್ಮೆಂಟ್ ಬಾಡಿಗೆ ತಿಂಗಳಿಗೆ 10 ಲಕ್ಷ ರೂಪಾಯಿಯಂತೆ.

ಆಥಿಯಾ ಶೆಟ್ಟಿ ಮತ್ತು ಕೆ.ಎಲ್, ರಾಹುಲ್ ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ನೇರವಾಗಿ ಇದುವರೆಗೂ ಬಹಿರಂಗಪಡಿಸದಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಇಬ್ಬರ ಫೋಟೋಗಳನ್ನು, ಪ್ರೀತಿಯ ಸಂದೇಶಗಳೊಂದಿಗೆ ಪೋಸ್ಟ್ ಮಾಡುತ್ತಿರುತ್ತಾರೆ.

ಇಬ್ಬರ ಪ್ರೀತಿಯ ಬಗ್ಗೆ ನಟ ಸುನಿಲ್ ಶೆಟ್ಟಿಗೂ ತಿಳಿದಿದೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ “ನಾನು ಅಹಾನ್ ಅವರ ಗೆಳತಿಯನ್ನು ಪ್ರೀತಿಸುತ್ತೇನೆ ಮತ್ತು ಆಥಿಯಾ ನೋಡುತ್ತಿರುವವರನ್ನು ನಾನು ಪ್ರೀತಿಸುತ್ತೇನೆ. ಅದರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ, ಮನಗೂ(ಸುನೀಲ್ ಶೆಟ್ಟಿ ಅವರ ಹೆಂಡತಿ) ಸಮಸ್ಯೆ ಇಲ್ಲ. ಅದರೊಂದಿಗೆ ಮತ್ತು ಅವರು ಸಂತೋಷವಾಗಿದ್ದಾರೆ. ಎನ್ನುವ ಮೂಲಕ ಮಗಳ ಪ್ರೀತಿಯ ಬಳ್ಳಿಗೆ ನೀರೆರೆಯುವಂತೆ ಮಾತನಾಡಿದ್ದಾರೆ.

ಸುನೀಲ್ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ಅವರು 2015ರ ಚಲನಚಿತ್ರ ಹೀರೋ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.


Stay up to date on all the latest ಕ್ರಿಕೆಟ್ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp