ಐಪಿಎಲ್ 2022: ನಿಧಾನಗತಿಯ ಬೌಲಿಂಗ್ ಹಿನ್ನಲೆ ಲಖನೌ ನಾಯಕ ಕೆ.ಎಲ್. ರಾಹುಲ್ಗೆ ಭಾರಿ ದಂಡ
ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ದಂಡದ ಸರಣಿ ಮುಂದುವರೆದಿದ್ದು, ರಿಷಬ್ ಪಂತ್ ಬೆನ್ನಲ್ಲೇ ಕೆಎಲ್ ರಾಹುಲ್ ಗೆ ಐಪಿಎಲ್ ಭಾರಿ ದಂಡ ವಿಧಿಸಿದೆ.
Published: 25th April 2022 03:53 PM | Last Updated: 25th April 2022 04:47 PM | A+A A-

ಕೆಎಲ್ ರಾಹುಲ್
ಮುಂಬೈ: ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ದಂಡದ ಸರಣಿ ಮುಂದುವರೆದಿದ್ದು, ರಿಷಬ್ ಪಂತ್ ಬೆನ್ನಲ್ಲೇ ಕೆಎಲ್ ರಾಹುಲ್ ಗೆ ಐಪಿಎಲ್ ಭಾರಿ ದಂಡ ವಿಧಿಸಿದೆ.
ನಿಧಾನಗತಿಯ ಬೌಲಿಂಗ್ಗಾಗಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮೇಲೆ ಐಪಿಎಲ್ ಆಡಳಿತ ಮಂಡಳಿ 24 ಲಕ್ಷ ರೂ ದಂಡ ವಿಧಿಸಿದೆ. ಅಲ್ಲದೆ ತಂಡದ ಉಳಿದೆಲ್ಲ ಆಟಗಾರರಿಗೆ ತಲಾ 6 ಲಕ್ಷ ರೂ ಅಥವಾ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ಹೇರಲಾಗಿದೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.
ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಲೋ ಓವರ್ರೇಟ್ಗೆ ಸಂಬಂಧಿಸಿದಂತೆ ರಾಹುಲ್ ದಂಡನೆಗೆ ಒಳಗಾಗಿದ್ದು, ರಾಹುಲ್ ಎರಡನೇ ಬಾರಿಗೆ ಐಪಿಎಲ್ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 24 ಲಕ್ಷ ರೂ ದಂಡ ಹೇರಲಾಗಿದೆ.
ಇದನ್ನೂ ಓದಿ: ಐಪಿಎಲ್ 2022: ಕೆ.ಎಲ್ ರಾಹುಲ್ ಭರ್ಜರಿ ಶತಕ, ಮುಂಬೈ ಇಂಡಿಯನ್ಸ್ ವಿರುದ್ಧ ಲಖನೌ ಗೆಲುವು
ಈ ಹಿಂದೆ ಮೊದಲ ಬಾರಿ ಇದೇ ತಪ್ಪಿಗಾಗಿ ರಾಹುಲ್ 12 ಲಕ್ಷ ರೂ ದಂಡ ತೆತ್ತಿದ್ದರು.
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ ಶತಕದ ನೆರವಿನಿಂದ ಲಖನೌ ತಂಡವು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 36 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಮುಂಬೈ ಸತತ 8ನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.