'ಐಪಿಎಲ್ ಬಿಟ್ಟು ಹೊರ ಬಾ': ಸತತ ವೈಫಲ್ಯದಲ್ಲಿರುವ ಶಿಷ್ಯ ಕೊಹ್ಲಿಗೆ ಗುರು ರವಿಶಾಸ್ತ್ರಿ ಸಲಹೆ!!

ಹಾಲಿ ಐಪಿಎಲ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಶಿಷ್ಯ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಹತ್ವದ ಸಲಹೆ ನೀಡಿದ್ದು, ಐಪಿಎಲ್ ಬಿಟ್ಟು ಹೊರ ಬರುವಂತೆ ಹೇಳಿದ್ದಾರೆ.

Published: 27th April 2022 11:25 AM  |   Last Updated: 27th April 2022 01:08 PM   |  A+A-


Ravi Shastri-Virat Kohli

ರವಿ ಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ

PTI

ಮುಂಬೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಶಿಷ್ಯ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಹತ್ವದ ಸಲಹೆ ನೀಡಿದ್ದು, ಐಪಿಎಲ್ ಬಿಟ್ಟು ಹೊರ ಬರುವಂತೆ ಹೇಳಿದ್ದಾರೆ.

ಹಾಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿರಾಟ್ ಕೊಹ್ಲಿ ಅವರು 9 ಪಂದ್ಯಗಳಲ್ಲಿ  ಕೇವಲ 128 ರನ್ ಗಳಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದರು ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೇವಲ 9 ರನ್ ಗಳಿಸಲಷ್ಟೇ ಸಾಧ್ಯವಾಗಿತು. ಈ ಹಿನ್ನಲೆಯಲ್ಲಿ ಕೊಹ್ಲಿ ಸಾಮರ್ಥ್ಯದ ಕುರಿತು ಸಾಕಷ್ಟು ಟೀಕೆಗಳು ಎದುರಾಗುತ್ತಿವೆ.

ಇದೇ ಕಾರಣಕ್ಕಾಗಿ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತೊಮ್ಮೆ ಕೊಹ್ಲಿ ಬೆನ್ನಿಗೆ ನಿಂತಿದ್ದು, ಕೊಹ್ಲಿ ತಮ್ಮ ಮನಸ್ಸನ್ನು ಫ್ರೆಶ್ ಮಾಡಲು ಐಪಿಎಲ್ ನಿಂದ ಬಿಡುವು ಪಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ. 'ಕೊಹ್ಲಿ ತಡೆರಹಿತ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ಅವರು ಎಲ್ಲಾ ಸ್ವರೂಪಗಳಲ್ಲಿ ತಂಡದ ನಾಯಕತ್ವ ವಹಿಸಿರುವುದರಿಂದ ಅವರಿಗೆ ವಿರಾಮವು ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ವಿರಾಮ ತೆಗೆದುಕೊಳ್ಳುವುದು ಅವರಿಗೆ ಉತ್ತಮವಾಗಿರುತ್ತದೆ. ನಿಮಗೆ ತಿಳಿದಿದೆ, ಕೆಲವೊಮ್ಮೆ ನೀವು ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇದು ಅವರು ಈಗಾಗಲೇ ಟೂರ್ನಮೆಂಟ್ (ಐಪಿಎಲ್ 2022) ಗೆ ಬಂದಿರುವ ವರ್ಷ, ನಾಳೆ ನಿಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಲು ಇದು ಒತ್ತಡಕ್ಕೆ ಕಾರಣವಾಗಬಹುದು. ಕೊಹ್ಲಿ ಇನ್ನು 6-7 ವರ್ಷಗಳ ಕಾಲ ಅಲ್ಲಿ ಛಾಪು ಮೂಡಿಸಲು ಬಯಸಿದರೆ, ನಿಮ್ಮ ಕಾಳಜಿಗಾಗಿ ಪ್ರಸ್ತುತ ಐಪಿಎಲ್‌ನಿಂದ ಹೊರಗುಳಿದು ವಿಶ್ರಾಂತಿ ಪಡೆಯಬೇಕು ಎಂದು ಶಾಸ್ತ್ರಿ ಜತಿನ್ ಸಪ್ರು ಅವರ ಯೂಟ್ಯೂಬ್ ಚಾನೆಲ್‌ ಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಐಪಿಎಲ್ 2022: ವಿರಾಟ್ ಕೊಹ್ಲಿ, ಮ್ಯಾಕ್ಸ್ ವೆಲ್ ಫ್ಲಾಪ್ ಶೋ, ಆರ್ ಸಿಬಿ ವಿರುದ್ಧ ಆರ್ ಆರ್ ಗೆಲುವು

“ನೀವು 14-15 ವರ್ಷಗಳ ಕಾಲ ಆಡಿದ್ದೀರಿ, ವಿರಾಟ್ ಮಾತ್ರವಲ್ಲ, ಬೇರೆ ಯಾವುದೇ ಆಟಗಾರನಿಗೆ ನಾನು ಇದನ್ನು ಹೇಳುತ್ತೇನೆ, ನೀವು ಭಾರತಕ್ಕಾಗಿ ಆಡಬೇಕು ಮತ್ತು ಉತ್ತಮ ಪ್ರದರ್ಶನ ನೀಡಬೇಕಾದರೆ, ನೀವು ಬಯಸಿದ ಗೆರೆ (ಅಗತ್ಯ ವಿರಾಮ)ಯನ್ನು ಎಳೆಯಬೇಕು. ಆ ವಿರಾಮವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು. ನೀವು ಅಂತರಾಷ್ಟ್ರೀಯ ಆಟಗಾರನಾಗಿ ನಿಮ್ಮ ವೃತ್ತಿಯ ಉತ್ತುಂಗವನ್ನು ತಲುಪಲು ಬಯಸಿದರೆ ಆ ಕಠಿಣ ಕರೆಗಳು ಬರಬೇಕು ಎಂದು ಅವರು ಹೇಳಿದರು.

ಆರ್ ಸಿಬಿ ಬ್ಯಾಟಿಂಗ್ ನಲ್ಲೇ ಸಮಸ್ಯೆ
ಇದೇ ವೇಳೆ ಆರ್ ಸಿಬಿ ಪ್ರದರ್ಶನದ ಕುರಿತು ಮಾತನಾಡಿದ ಶಾಸ್ತ್ರಿ, 'ಆರ್‌ಸಿಬಿ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಸಮಸ್ಯೆ ಇದೆ. ಆದರೆ, ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್‌ ವಿಭಾಗ ತಂಡದಲ್ಲಿ ಅತ್ಯುತ್ತಮವಾಗಿದೆ. ಹಾಗಾಗಿ ಅಗ್ರ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿದರೆ ತಂಡ ಇನ್ನಷ್ಟು ಬಲಿಷ್ಠವಾಗಿ ಕಾಣಲಿದೆ. "ಆರ್‌ಸಿಬಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸ್ವಲ್ಪ ಸಮಸ್ಯೆಯಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಿಡಿಯುವುದು ಇಲ್ಲಿನ ನಿರ್ಣಾಯಕ ಸಂಗತಿಯಾಗಿದೆ. ಏಕೆಂದರೆ, ಬೌಲಿಂಗ್‌ ವಿಭಾಗ ಉತ್ತಮ ಪ್ರದರ್ಶನ ತೋರುತ್ತಿದೆ ಹಾಗೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ಶಹಬಾಜ್‌ ಅಹ್ಮದ್‌ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ಗೆ ಮರಳುವುದು ತುಂಬಾ ಅಗತ್ಯ. ಆರ್‌ಸಿಬಿ ಪ್ಲೇಆಫ್ಸ್‌ಗೆ ಪ್ರವೇಶಿಸಲು ಹಾಗೂ ಚೊಚ್ಚಲ ಕಪ್‌ ಗೆಲ್ಲಬೇಕೆಂದರೆ ಅಗ್ರ ಕ್ರಮಾಂಕದಲ್ಲಿ ರನ್‌ ಹೊಳೆ ಹರಿಯಬೇಕಾಗಿದೆ," ಎಂದು ಹೇಳಿದರು. 

"ವಿರಾಟ್ ಕೊಹ್ಲಿ ಇನ್ನೂ ಸಾಕಷ್ಟು ರನ್‌ಗಳಿಸಬೇಕಾದ ಅಗತ್ಯವಿದೆ. ಹಾಗಾಗಿ, ಅವರು ಆರಂಭದಲ್ಲಿ ತಾಳ್ಮೆಯಿಂದಿರಬೇಕು. ಆರಂಭದಲ್ಲಿ ಗಾಳಿಯಲ್ಲಿ ಚೆಂಡನ್ನು ಹೊಡೆಯದೆ ನೆಲದಲ್ಲಿಯೇ ಆಡಬೇಕು. ಆರಂಭದಲ್ಲಿ ಸ್ವಲ್ಪ ರನ್‌ಗಳನ್ನು ಗಳಿಸಿದ ಬಳಿಕ ಅವರು ಲಯಕ್ಕೆ ಮರಳಲಿದ್ದಾರೆ. ತದನಂತರ, ಅವರ ಬ್ಯಾಟ್‌ನಿಂದ ರನ್‌ ಸುರಿ ಮಳೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಅವರು ತಮಗೆ ತಮ್ಮದೇ ಆದ ಸಮಯವನ್ನು ನೀಡಬೇಕು," ಎಂದರು.


Stay up to date on all the latest ಕ್ರಿಕೆಟ್ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp