ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಸೀಮಿತ ಓವರ್ಗಳ ಸರಣಿಗೆ ಉಮ್ರಾನ್ ಮಲಿಕ್ ಸೇರಿಸಿಕೊಳ್ಳಿ: ಗವಾಸ್ಕರ್
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಅದ್ಭುತ ಸಾಧನೆ ಮಾಡಿದ್ದು ಇದರ ಬೆನ್ನಲ್ಲೇ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಯುವ ವೇಗಿ ಉಮ್ರಾನ್ ಮಲಿಕ್ ನನ್ನು ಟೀಂ ಇಂಡಿಯಾಗೆ ಸೇರಿಸಿಕೊಳ್ಳಿ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
Published: 28th April 2022 04:44 PM | Last Updated: 28th April 2022 04:56 PM | A+A A-

ಉಮ್ರಾನ್ ಮಲಿಕ್-ಕೊಹ್ಲಿ
ಮುಂಬೈ: ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಅದ್ಭುತ ಸಾಧನೆ ಮಾಡಿದ್ದು ಇದರ ಬೆನ್ನಲ್ಲೇ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಯುವ ವೇಗಿ ಉಮ್ರಾನ್ ಮಲಿಕ್ ನನ್ನು ಟೀಂ ಇಂಡಿಯಾಗೆ ಸೇರಿಸಿಕೊಳ್ಳಿ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಜಮ್ಮುವಿನ 22 ವರ್ಷದ ಸನ್ರೈಸರ್ಸ್ ಹೈದರಾಬಾದ್ ವೇಗಿ ಬುಧವಾರ ರಾತ್ರಿ 25 ರನ್ಗಳಿಗೆ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ.
ಆದರೆ ರಶೀದ್ ಖಾನ್(11 ಎಸೆತಗಳಲ್ಲಿ ಅಜೇಯ 31) ಮತ್ತು ರಾಹುಲ್ ತೆವಾಟಿಯಾ(21 ಎಸೆತಗಳಲ್ಲಿ ಅಜೇಯ 40) ಕೊನೆಯ ನಾಲ್ಕು ಓವರ್ಗಳಲ್ಲಿ 56 ರನ್ ಸಿಡಿಸಿ ಅಂತಿಮ ಆರು ಎಸೆತಗಳಲ್ಲಿ 22 ರನ್ ಗಳಿಸಿ ಟೈಟಾನ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದನ್ನೂ ಓದಿ: ಐಪಿಎಲ್ 2022: ಸನ್ರೈಸರ್ಸ್ ವಿರುದ್ಧ ಕೊನೆ ಬಾಲ್ ನಲ್ಲಿ ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್
ಟೀಂ ಇಂಡಿಯಾದಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್ ಇರುವುದರಿಂದ 11ರ ಬಳಗದಲ್ಲಿ ಉಮ್ರಾನ್ ಮಲಿಕ್ ಆಡಲು ಅವಕಾಶ ಸಿಗದಿರಬಹುದು. ಆದರೆ ಗುಂಪಿನೊಂದಿಗೆ ಪ್ರಯಾಣಿಸುವುದರಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಡ್ರೆಸ್ಸಿಂಗ್ ರೂಮ್ ನಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ತಿಳಿಯಲಿದೆ ಎಂದರು.
ಯುವ ವೇಗಿ ಋತುವಿನ ಉದ್ದಕ್ಕೂ 150 ಕಿ.ಮೀ ವೇಗದ ಸ್ಥಿರ ಬೌಲಿಂಗ್ ಹೊಂದಿದ್ದಾರೆ. 16 ಪಂದ್ಯಗಳಲ್ಲಿ 19.69ರ ಸರಾಸರಿಯಲ್ಲಿ 26 ವಿಕೆಟ್ಗಳನ್ನು ಪಡೆದಿದೆ.
ಎಂಟನೇ ಓವರ್ನ ಕೊನೆಯಲ್ಲಿ ಬೌಲಿಂಗ್ ದಾಳಿ ಆರಂಭಿಸಿದ್ದ ಮಲಿಕ್ ಗುಜರಾತ್ ಟೈಟಾನ್ಸ್ ಅಗ್ರ ಕ್ರಮಾಂಕದ ಮೂಲಕ ವಿನಾಶಕಾರಿ ವೇಗದ ಎಸೆತಗಳನ್ನು ಬೌಲ್ ಮಾಡಿ ಇನ್ನಿಂಗ್ಸ್ನ ಎಲ್ಲಾ ಮೊದಲ ಐದು ವಿಕೆಟ್ಗಳನ್ನು ಪಡೆದ ಮೊದಲ IPL ಬೌಲರ್ ಎನಿಸಿಕೊಂಡರು.