ಐಪಿಎಲ್ 2022: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 4 ವಿಕೆಟ್ ಗೆಲುವು
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸ್ಪಿನ್ನರ್ ಕುಲದೀಪ್ ಯಾದವ್ ಮಾರಕ ದಾಳಿ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್ ಗಳ ಗೆಲುವು ಸಾಧಿಸಿದೆ.
Published: 29th April 2022 12:13 AM | Last Updated: 29th April 2022 07:48 PM | A+A A-

ಕುಲದೀಪ್ ಯಾದವ್
ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸ್ಪಿನ್ನರ್ ಕುಲದೀಪ್ ಯಾದವ್ ಮಾರಕ ದಾಳಿ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್ ಗಳ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳ ಸಾಧಾರಣ ಮೊತ್ತ ಸೇರಿಸಿತು.
ಗೆಲುವಿಗೆ 147 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು.
ಇದನ್ನು ಓದಿ: ಐಪಿಎಲ್ 2022: ಸನ್ರೈಸರ್ಸ್ ವಿರುದ್ಧ ಕೊನೆ ಬಾಲ್ ನಲ್ಲಿ ರೋಚಕ ಗೆಲುವು ಸಾಧಿಸಿದ ಗುಜರಾತ್ ಟೈಟನ್ಸ್
ಮಧ್ಯಮ ವೇಗಿ ಉಮೇಶ್ ಯಾದವ್ (3 ವಿಕೆಟ್) ದಾಳಿ ನಡುವೆಯೂ ಡೆಲ್ಲಿ ತಂಡದ ಪರ ಡೇವಿಡ್ ವಾರ್ನರ್(42), ಲಲಿತ್ ಯಾದವ್ (22), ರೋವ್ ಮನ್ ಪೊವೆಲ್ (ಅಜೇಯ 33 ರನ್), ಅಕ್ಸರ್ ಪಟೇಲ್ (24) ತಂಡದ ಗೆಲುವಿಗೆ ಉತ್ತಮ ಕಾಣಿಕೆ ನೀಡಿದರು.
ಇನ್ನು ಕೋಲ್ಕತ್ತಾ ಪರ ನಾಯಕ ಶ್ರೇಯಸ್ ಐಯ್ಯರ್ 42 ರನ್ ಹಾಗೂ ನಿತೀಶ್ ರಾಣಾ ಅವರು 34 ಎಸೆತದಲ್ಲಿ 4 ಸಿಕ್ಸ್ 3 ಫೋರ್ ಸಿಡಿಸಿ 57 ರನ್ ಕೊಡುಗೆ ನೀಡುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಪ್ರಮುಖಪಾತ್ರ ವಹಿಸಿದರು.