ಟೀಂ ಇಂಡಿಯಾ ಉಪ ನಾಯಕ: ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿ

ಮುಂಬರುವ ಏಷ್ಯಾ ಕಪ್ 2022 ಮತ್ತು ಟಿ-20 ವಿಶ್ವ ಕಪ್ ಟೂರ್ನಮೆಂಟ್ ಗಳಿಗೆ ಟೀಂ ಇಂಡಿಯಾದ ಉಪ ನಾಯಕನ ಸ್ಥಾನಕ್ಕೆ ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿದೆ.
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ನವದೆಹಲಿ: ಮುಂಬರುವ ಏಷ್ಯಾ ಕಪ್ 2022 ಮತ್ತು ಟಿ-20 ವಿಶ್ವ ಕಪ್ ಟೂರ್ನಮೆಂಟ್ ಗಳಿಗೆ ಟೀಂ ಇಂಡಿಯಾದ ಉಪ ನಾಯಕನ ಸ್ಥಾನಕ್ಕೆ ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿದೆ. ಇತ್ತೀಚಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿದ್ದ ಕೆ. ಎಲ್ ರಾಹುಲ್ ಅವರಿಂದ ಉಪ ನಾಯಕನ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ಪಡೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಉಪ ನಾಯಕನ ಸ್ಥಾನಕ್ಕಾಗಿ ಹಾರ್ದಿಕ್ ಪಾಂಡ್ಯ ಹೆಸರು ಕುರಿತು ಮ್ಯಾನೇಜ್ ಮೆಂಟ್ ಚರ್ಚೆ ನಡೆಸಿದೆ. ಐಪಿಎಲ್ 2022ರಲ್ಲಿ ಗುಜರಾತ್ ಟೈಟನ್ ಚಾಂಪಿಯನ್ ಆಗುವಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಉಪ ನಾಯಕನ ಸ್ಥಾನಕ್ಕೆ ಆಲ್ ರೌಂಡರ್ ಹೆಸರನ್ನು ಬಯಸುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಈ ಸ್ಥಾನಕ್ಕೆ ಸೂಕ್ತ ಎಂದು ಮೂಲಗಳು ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಐರ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಇದರ ನಂತರ, ಅವರು ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ-20 ಸರಣಿಯಲ್ಲಿ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಕಾರಣದಿಂದ 2022 ರ ಟಿ- 20 ವಿಶ್ವಕಪ್‌ಗೆ ಮೊದಲು ಕೆಎಲ್ ರಾಹುಲ್ ಬದಲಿಗೆ ಹಾರ್ದಿಕ್​ಗೆ  ಟೀಮ್ ಇಂಡಿಯಾದ ಉಪನಾಯಕತ್ವವನ್ನು ಸಂಪೂರ್ಣವಾಗಿ ಹಸ್ತಾಂತರಿಸಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದೇ ವರ್ಷದ ಆಗಸ್ಟ್ 27 ರಿಂದ ಏಷ್ಯಾಕಪ್  ಆರಂಭವಾಗಲಿದೆ. ಅಕ್ಟೋಬರ್ -ನವೆಂಬರ್ ನಿಂದ ಐಸಿಸಿ ಟಿ-20 ವಿಶ್ವಕಪ್ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com