ಕಾಮನ್ ವೆಲ್ತ್ ಗೇಮ್ಸ್: ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಆಸಿಸ್ ವನಿತೆಯರು, ಕೋವಿಡ್ ಇದ್ದರೂ ಮೈದಾನಕ್ಕಿಳಿದ ಆಟಗಾರ್ತಿ!

ಕಾಮನ್ ವೆಲ್ತ್ ಗೇಮ್ಸ್ ಮಹಿಳೆಯ ಕ್ರಿಕೆಟ್ ಫೈನಲ್ ನಲ್ಲಿ ಆಸ್ಚ್ರೇಲಿಯಾ ಆಟಗಾರ್ತಿಯರು  ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಪರಿಣಾಮ ಭಾರತ ತಂಡದ ಆಟಗಾರ್ತಿಯರೂ ಸೇರಿದಂತೆ ಮೈದಾನದಲ್ಲಿದ್ದ ಎಲ್ಲರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಸೋಂಕಿಗೆ ತುತ್ತಾಗಿರುವ ಆಸಿಸ್ ಆಟಗಾರ್ತಿ ಮೆಕ್ ಗ್ರಾತ್
ಸೋಂಕಿಗೆ ತುತ್ತಾಗಿರುವ ಆಸಿಸ್ ಆಟಗಾರ್ತಿ ಮೆಕ್ ಗ್ರಾತ್

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ಮಹಿಳೆಯ ಕ್ರಿಕೆಟ್ ಫೈನಲ್ ನಲ್ಲಿ ಆಸ್ಚ್ರೇಲಿಯಾ ಆಟಗಾರ್ತಿಯರು  ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಪರಿಣಾಮ ಭಾರತ ತಂಡದ ಆಟಗಾರ್ತಿಯರೂ ಸೇರಿದಂತೆ ಮೈದಾನದಲ್ಲಿದ್ದ ಎಲ್ಲರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಹೌದು.. ಕ್ರಿಕೆಟ್ ಜೆಂಟಲ್ ಮನ್ ಗೇಮ್ ಎಂದೇ ಖ್ಯಾತಿ ಪಡೆದ ಆಟ.. ಆದರೆ ಇಂತಹ ಆಟದಲ್ಲಿ ಕೆಲ ಆಟಗಾರರು ತೋರುವ ದುರ್ವರ್ತನೆ ಇಡೀ ಆಟಕ್ಕೆ ಕಪ್ಪು ಮಸಿ ಬಳಿಯುತ್ತಿದೆ. ಇಂತಹುದೇ ಮತ್ತೊಂದು ಪ್ರಕರಣ ನಿನ್ನೆ ಬೆಳಕಿಗೆ ಬಂದಿದ್ದು, ನಿನ್ನೆ ನಡೆದ ಮಹಿಳೆಯ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸಿಸ್ ಆಟಗಾರ್ತಿಯರು ಗೆಲುವಿಗಾಗಿ ಅಕ್ಷರಶಃ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅವರ ದುರ್ವರ್ತನೆ ಇದೀಗ ಕ್ರಿಕೆಟ್ ಪ್ರಿಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಾತ್ರವಲ್ಲದೇ ಫೈನಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತೀಯ ಆಟಗಾರ್ತಿಯರನ್ನೂ ಸಂಕಷ್ಟಕ್ಕೆ ತಳ್ಳಿದೆ.

ಹೌದು.. ಬಹು ನಿರೀಕ್ಷಿತ ಫೈನಲ್ ಪಂದ್ಯಗಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ತಹ್ಲಿಯಾ ಮೆಕ್‌ಗ್ರಾತ್ ತಮಗೆ ಕೋವಿಡ್ ಸೋಂಕು ಇರುವ ಹೊರತಾಗಿಯೂ ಮೈದಾನಕ್ಕಿಳಿದು ಇತರ ಆಟಗಾರ್ತಿಯರ ಆರೋಗ್ಯಕ್ಕೆ ಸಂಚಕಾರ ತಂದಿದ್ದರು. ಭಾನುವಾರ ನಡೆದ ಭಾರತದ ವಿರುದ್ಧದ ಫೈನಲ್‌ ಪಂದ್ಯಕ್ಕೆ ಕೆಲವೇ ನಿಮಿಷಗಳ ಮೊದಲು ಮೆಕ್‌ಗ್ರಾತ್ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಇದೇ ಕಾರಣಕ್ಕೆ ಪಂದ್ಯದ ಆಯೋಜಕರು ಟಾಸ್ ವಿಳಂಬ ಮಾಡಿದ್ದರು. 

ಆಸಿಸ್ ತಂಡದ ಮ್ಯಾನೇಜ್ ಮೆಂಟ್ ಜೊತೆ ಚರ್ಚೆ ನಡೆಸಿದ್ದ ಆಯೋಜಕರು ಪಂದ್ಯ ಮುಂದುವರೆಸಿದ್ದರು. ಆದರೆ ಆಘಾತಕಾರಿ ವಿಚಾರವೆಂದರೆ ಸೋಂಕಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಸೋಂಕಿಗೆ ತುತ್ತಾಗಿದ್ದ ಸ್ಟಾರ್ ಆಲ್‌ರೌಂಡರ್ ಮೆಕ್‌ಗ್ರಾತ್‌ ರನ್ನೂ ಕೂಡ ಕಣಕ್ಕಿಳಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಆಸ್ಟ್ರೇಲಿಯಾದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ಕ್ರೀಡಾಕೂಟದ ತಂಡ ತಿಳಿಸಿದೆ.  

"CGA ಕ್ಲಿನಿಕಲ್ ಸಿಬ್ಬಂದಿ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ RACEG (ಫಲಿತಾಂಶಗಳ ವಿಶ್ಲೇಷಣೆ ಕ್ಲಿನಿಕಲ್ ಎಕ್ಸ್‌ಪರ್ಟ್ ಗ್ರೂಪ್) ತಂಡ ಮತ್ತು ಪಂದ್ಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೆಕ್‌ಗ್ರಾತ್ ಭಾನುವಾರ ಸೌಮ್ಯ ರೋಗಲಕ್ಷಣಗಳೊಂದಿಗೆ ತಂಡದೊಂದಿಗೆ ಇದ್ದರು. ಸೋಂಕಿನ ಹೊರತಾಗಿಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಫೈನಲ್‌ನಲ್ಲಿ ಅಕೆಯ ಭಾಗವಹಿಸುವಿಕೆಯನ್ನು ಅನುಮೋದಿಸಿತು. CGF ಮತ್ತು ICC ಯೊಂದಿಗೆ ಸಮಾಲೋಚಿಸಿ, CGA ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ವೈದ್ಯಕೀಯ ಸಿಬ್ಬಂದಿ ಎಲ್ಲಾ ಆಟಗಾರರು ಮತ್ತು ಅಧಿಕಾರಿಗಳಿಗೆ ಹರಡುವ ಅಪಾಯವನ್ನು ಕಡಿಮೆ ಮಾಡಲು ಆಟದ ಉದ್ದಕ್ಕೂ ಮತ್ತು ಪಂದ್ಯದ ನಂತರದ ಚಟುವಟಿಕೆಗಾಗಿ ಸಮಗ್ರ ಪ್ರೋಟೋಕಾಲ್‌ಗಳ ಶ್ರೇಣಿಯನ್ನು ಜಾರಿಗೆ ತರಲಾಗಿದೆ ಎಂದು ಆಸಿಸ್ ಕ್ರಿಕೆಟ್ ಆಡಳಿತ ಮಂಡಳಿ ಹೇಳಿದೆ. 

ಅದಾಗ್ಯೂ ಕೋವಿಡ್ ಪೀಡಿತ ಆಟಗಾರರು ಪಂದ್ಯದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಕಾಮನ್ ವೆಲ್ತ್ ಕ್ರೀಡಾಕೂಟದ ಆಯೋಜಕರು ಆಯಾ ತಂಡಗಳಿಗೆ ಬಿಟ್ಟಿದ್ದಾರೆ. ಆದರೆ ನೈತಿಕತೆಯಿಂದ ಮತ್ತು ಇತರೆ ಆಟಗಾರರ ರಕ್ಷಣೆಯ ದೃಷ್ಟಿಕೋನದಿಂದ ಆಸಿಸ್ ತಂಡ ಸೋಂಕಿತ ಆಟಗಾರ್ತಿಯನ್ನು ಕಣಕ್ಕಿಳಿಸಬಾರದಿತ್ತು ಎನ್ನುವುದು ಕ್ರೀಡಾಭಿಮಾನಿಗಳ ಅಭಿಮತವಾಗಿದೆ. 

ಇನ್ನು ಈ ಪಂದ್ಯದುದ್ದಕ್ಕೂ ಸೋಂಕಿತ ಆಟಗಾರ್ತಿ ಮೆಕ್ ಗ್ರಾತ್ ಮಾಸ್ಕ್ ಧರಿಸಿದ್ದರು. ಬ್ಯಾಟಿಂಗ್ ವೇಳೆ ಮಾಸ್ಕ್ ತೆಗೆದಿದ್ದರೂ ಆಕೆ ಕೇವಲ ನಾಲ್ಕು ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದ್ದರು. ಉಳಿದಂತೆ ತಂಡದಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಗ್ಯಾಲರಿಯಲ್ಲಿ ಕುಳಿತು ಆಟ ವೀಕ್ಷಿಸಿದ್ದರು. ಇನ್ನು ಭಾರತ ಬ್ಯಾಟಿಂಗ್ ವೇಳೆ ಮೆಕ್‌ಗ್ರಾತ್ ಔಟ್‌ಫೀಲ್ಡ್‌ನಲ್ಲಿ ಕ್ಯಾಚ್ ತೆಗೆದುಕೊಂಡಾಗ ತನ್ನ ತಂಡದ ಸಹ ಆಟಗಾರರು ಸಂಭ್ರಮಿಸುವಾಗ ತನ್ನ ಹತ್ತಿರ ಬರದಂತೆ ನೆನಪಿಸುತ್ತಿದ್ದರು. ಅಂತೆಯೇ ಮೆಕ್‌ಗ್ರಾತ್ ಪಂದ್ಯದ ನಂತರದ ಪದಕ ಸಮಾರಂಭದಲ್ಲಿ ಭಾಗವಹಿಸಿದರು. ಮಾಸ್ಕ್ ಧರಿಸಿಯೇ ಸಹ ಆಟಗಾರರೊಂದಿಗೆ ಬೆರೆಯುವಾಗ ಮತ್ತು ಫೋಟೋಗಳಿಗೆ ಪೋಸ್ ನೀಡಿದರು.

ಆಸಿಸ್ ತಂಡದ ವಿರುದ್ಧ ವ್ಯಾಪಕ ಆಕ್ರೋಶ
ಇನ್ನು ಗೆಲುವಿಗಾಗಿ ನಿಯಮಗಳನ್ನು ಗಾಳಿಗೆ ತೂರಿದ ಆಸಿಸ್ ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ರೀಡಾ ವರದಿಗಾರ ನವೀನ್ ಶರ್ಮಾ ಆಸ್ಟ್ರೇಲಿಯಾದ ಈ ಕ್ರಮವನ್ನು "ನಾಚಿಕೆಯಿಲ್ಲದ ನಡವಳಿಕೆ" ಎಂದು ಜರಿದಿದ್ದಾರೆ, "ಆಸ್ಟ್ರೇಲಿಯನ್ನರು ಯಾವಾಗಲೂ ಸರಿ ಅಥವಾ ತಪ್ಪಿನ ಬಗ್ಗೆ ಬೋಧಿಸುತ್ತಾರೆ ಆದರೆ ತಮ್ಮ ವಿಷಯಕ್ಕೆ ಬಂದಾಗ ಅವರು  ಎಲ್ಲವನ್ನೂ ಮರೆತುಬಿಡುತ್ತಾರೆ ಎಂದು ಟೀಕಿಸಿದ್ದಾರೆ.

ಬ್ಲೂಮ್‌ಬರ್ಗ್ ನ್ಯೂಸ್ ವರದಿಗಾರ ಅಕ್ಷತ್ ರಥಿ ಅವರು ಈ ಕುರಿತು ಟ್ವೀಟ್ ಮಾಡಿದ್ದು, “ಕೋವಿಡ್ -19 ಸೋಂಕಿಗೆ ತುತ್ತಾದ ಹೊರತಾಗಿಯೂ ಕ್ರಿಕೆಟ್ ಪಂದ್ಯವನ್ನು ಆಡುವ ಮೈದಾನದಲ್ಲಿ ತಹ್ಲಿಯಾ ಮೆಕ್‌ಗ್ರಾತ್‌ಗೆ ಆಡಲು ನಿಯಮಗಳು ಹೇಗೆ ಅವಕಾಶ ನೀಡುತ್ತಿವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಧಿಕಾರಿಗಳ ಕರ್ತವ್ಯ ಲೋಪ” ಇದು. ಇದೇ ಪಂದ್ಯವನ್ನು ಆಸ್ಟ್ರೇಲಿಯದಲ್ಲಿ ಆಡಿದ್ದರೆ, ಕೋವಿಡ್-19 ನೀತಿಗಳಲ್ಲಿನ ಹಾಸ್ಯಾಸ್ಪದ ಅಸಂಗತತೆಯನ್ನು ಎತ್ತಿ ತೋರಿಸುವ ಮೂಲಕ ಮೆಕ್‌ಗ್ರಾತ್ ಏಳು ದಿನಗಳ ಕಾಲ ಪ್ರತ್ಯೇಕವಾಗಿರಲು ಒತ್ತಾಯಿಸಲ್ಪಡುತ್ತಿದ್ದರು ಎಂದು ಟೀಕಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com