ಟಿ-20 ವಿಶ್ವಕಪ್: ಬಾಂಗ್ಲಾದೇಶದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ನೇಮಕ
ಮುಂಬರುವ ಏಷ್ಯಾಕಪ್ ಹಾಗೂ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.
Published: 19th August 2022 03:22 PM | Last Updated: 19th August 2022 03:39 PM | A+A A-

ಶ್ರೀಧರನ್ ಶ್ರೀರಾಮ್
ಢಾಕಾ: ಮುಂಬರುವ ಏಷ್ಯಾಕಪ್ ಹಾಗೂ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ತರಬೇತುದಾರನಾಗಿ ಭಾರತದ ಮಾಜಿ ಆಲ್ ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.
ಶ್ರೀರಾಮ್ ಅವರನ್ನು ನೇಮಕ ಮಾಡಿರುವುದನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕೊಬ್ಬರು ಖಚಿತಪಡಿಸಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ವಿಶ್ವಕಪ್ ವರೆಗೂ ಶ್ರೀರಾಮ್ ಅವರನ್ನು ಆಯ್ಕೆ ಮಾಡಿದ್ದೇವೆ. ಹೊಸ ಮನಸ್ಥಿತಿಯೊಂದಿಗೆ ನಾವು ಮುಂದುವರೆಯಲಿದ್ದು, ಏಷ್ಯಾ ಕಪ್ ನಿಂದ ನೂತನ ತರಬೇತುದಾರರನ್ನು ಕಾಣಬಹುದು. ಟಿ-20 ವಿಶ್ವಕಪ್ ಪ್ರಮುಖ ಗುರಿಯಾಗಿದೆ. ಹೊಸ ತರಬೇತುದಾರ ಏಷ್ಯಾ ಕಪ್‌ನಿಂದ ನೇಮಕಗೊಳ್ಳದಿದ್ದರೆ ಹೊಂದಿಕೊಳ್ಳಲು ಸಮಯ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಶ್ರೀರಾಮ್ 2000 ಮತ್ತು 2004 ರ ನಡುವೆ ಎಂಟು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಆಸ್ಟ್ರೇಲಿಯಾದ ಸಹಾಯಕ ಮತ್ತು ಸ್ಪಿನ್-ಬೌಲಿಂಗ್ ತರಬೇತುದಾರರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.ಆಸ್ಟ್ರೇಲಿಯಾದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಅಡಿಯಲ್ಲಿ, 2016 ರಲ್ಲಿ ಶ್ರೀರಾಮ್ ಅವರಿಗೆ ಸ್ಪಿನ್ ಬೌಲಿಂಗ್ ಕೋಚ್ ಜವಾಬ್ದಾರಿ ವಹಿಸಲಾಗಿತ್ತು.
46 ವರ್ಷದ ಶ್ರೀಧರನ್ ಶ್ರೀರಾಮ್ ಇತ್ತೀಚಿಗೆ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.