ಏಷ್ಯಾ ಕಪ್: ಕಾಮೆಂಟ್ ಗಳಿಗೆ ತಲೆಕೆಡಿಸಿಕೊಳ್ಳಲ್ಲ- ಕೆ.ಎಲ್. ರಾಹುಲ್

ಕಾಮೆಂಟ್ ಗಳು ಯಾವುದೇ ಆಟಗಾರರ ಮೇಲೆ ಪರಿಣಾಮ ಬೀರಲ್ಲ, ಆದ್ದರಿಂದ ಅಂತಹ ಕಾಮೆಂಟ್ ಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂದು ಟೀಂ ಇಂಡಿಯಾ ಉಪ ನಾಯಕ ಕೆ. ಎಲ್. ರಾಹುಲ್ ಹೇಳಿದ್ದಾರೆ.
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್

ದುಬೈ: ಕಾಮೆಂಟ್ ಗಳು ಯಾವುದೇ ಆಟಗಾರರ ಮೇಲೆ ಪರಿಣಾಮ ಬೀರಲ್ಲ, ಆದ್ದರಿಂದ ಅಂತಹ ಕಾಮೆಂಟ್ ಗಳಿಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂದು ಟೀಂ ಇಂಡಿಯಾ ಉಪ ನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.

ನಾಳೆಯಿಂದ ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೆಎಲ್ ರಾಹುಲ್, ಹೊರಗಡೆಯ ಜನ ಮಾಡುವ ಕಾಮೆಂಟ್ ಗಳು ವಿರಾಟ್ ಕೊಹ್ಲಿಯಂತಹ ವಿಶ್ವದರ್ಜೆಯ ಆಟಗಾರರ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಅವರು ಸ್ವಲ್ವ ವಿರಾಮ ಪಡೆದುಕೊಂಡಿದ್ದರು. ಇದೀಗ ಅವರು ಪಂದ್ಯದತ್ತ ಕಾರ್ಯೋನ್ಮುಖವಾಗಿದ್ದಾರೆ ಎಂದರು. 

'ನಾನು ಗಾಯಗೊಂಡಾಗ ಎರಡು ತಿಂಗಳು ಮನೆಯಲ್ಲಿದ್ದೆ, ಟಿವಿಯಲ್ಲಿ ನೋಡುತ್ತಿದ್ದಾಗ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಅಂತಾ ಅನಿಸುತ್ತಿರಲಿಲ್ಲ. ದೇಶಕ್ಕಾಗಿ ಪಂದ್ಯ ಗೆಲ್ಲಿಸುವ ಹಂಬಲವನ್ನು ಅವರು ಹೊಂದಿದ್ದಾರೆ. ಅದನ್ನೇ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದಾರೆ ಎಂದು ರಾಹುಲ್ ಹೇಳಿದರು. 

ಕಳೆದ ವರ್ಷ ಟಿ-20ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಹಾಗೂ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಆರಂಭಿಕ ಪಂದ್ಯ ಕುರಿತಂತೆ ಮಾತನಾಡಿದ ರಾಹುಲ್, ನಾವು ಎಷ್ಟು ಬಾರಿ ಆಡಿದ್ದೇವೆ ಮತ್ತು ಪ್ರತಿ ತಂಡ ಎಷ್ಟು ಗೆದ್ದಿದೆ ಎಂಬುದಕ್ಕೆ ಇತಿಹಾಸವಿರಬಹುದು ಆದರೆ ಅದು ಯಾವುದಕ್ಕೂ ಲೆಕ್ಕವಿಲ್ಲ. ಇದು ಯಾವಾಗಲೂ ಶೂನ್ಯದಿಂದ ರಿಂದ ಪ್ರಾರಂಭವಾಗುತ್ತದೆ ಅಥವಾ ಚೆನ್ನಾಗಿ ಆರಂಭವನ್ನು ಬಯಸುತ್ತದೆ ಎಂದರು.

ಈ ದೂಡ್ಡ ಟೊರ್ನಮೆಂಟ್ ಹೊರತುಪಡಿಸಿ ಬೇರೆಲ್ಲಿಯೂ ನಾವು ಪರಸ್ಪರ ಆಡುವುದಿಲ್ಲವಾದ್ದರಿಂದ ನಾವು ಯಾವಾಗಲೂ ಭಾರತ-ಪಾಕಿಸ್ತಾನ ಪಂದ್ಯವನ್ನು ಎದುರು ನೋಡುತ್ತೇವೆ. ಆದ್ದರಿಂದ, ಪಾಕ್‌ನಂತಹ ತಂಡದ ವಿರುದ್ಧ ಸ್ಪರ್ಧಿಸಲು ಇದು ನಮಗೆ ಯಾವಾಗಲೂ ರೋಚಕ ಸಮಯ ಹಾಗೂ ದೊಡ್ಡ ಸವಾಲು ಆಗಿದೆ ಎಂದು ರಾಹುಲ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com