ಹೃದಯಾಘಾತ ಭೀತಿಯಿಂದ ಹೊರಬಂದ ನಂತರ ಕಾಮೆಂಟರಿ ಬಾಕ್ಸ್ ಗೆ ಮರಳಿದ ರಿಕಿ ಪಾಟಿಂಗ್!

ಹೃದಯಾಘಾತ ಭೀತಿಯಿಂದ ಹೊರಬಂದ ನಂತರ ಮಾಜಿ ಆಸ್ಟ್ರೇಲಿಯಾದ ಕ್ಯಾಪ್ಟನ್ ರಿಕಿ ಪಾಟಿಂಗ್  ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಟೆಸ್ಟ್‌ ಕ್ರಿಕೆಟ್‌ ಸರಣಿಯ ಕಾಮೆಂಟರಿ ಬಾಕ್ಸ್ ಗೆ ವಾಪಸ್ಸಾಗಿದ್ದಾರೆ.
ರಿಕಿ ಪಾಟಿಂಗ್
ರಿಕಿ ಪಾಟಿಂಗ್

ಪರ್ತ್:  ಹೃದಯಾಘಾತ ಭೀತಿಯಿಂದ ಹೊರಬಂದ ನಂತರ ಮಾಜಿ ಆಸ್ಟ್ರೇಲಿಯಾದ ಕ್ಯಾಪ್ಟನ್ ರಿಕಿ ಪಾಟಿಂಗ್  ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಟೆಸ್ಟ್‌ ಕ್ರಿಕೆಟ್‌ ಸರಣಿಯ ಕಾಮೆಂಟರಿ ಬಾಕ್ಸ್ ಗೆ ವಾಪಸ್ಸಾಗಿದ್ದಾರೆ.

ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ರಿಕಿ ಪಾಟಿಂಗ್, ಆರಂಭಿಕ ಟೆಸ್ಟ್‌ನ ಮೂರನೇ ದಿನದ ಬೋಜನ ವಿರಾಮದ ಸಮಯದಲ್ಲಿ ತೀಕ್ಷ್ಣವಾದ ನೋವು ಮತ್ತು ತಲೆತಿರುಗುವಿಕೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಶನಿವಾರ ನಾಲ್ಕನೇ ದಿನದಾಟದ ಆರಂಭಕ್ಕೂ ಮುನ್ನ ಚಾನೆಲ್ 7 ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ರಿಕಿ ಪಾಟಿಂಗ್,  ನಿನ್ನೆ ನಾನು ಬಹುಶಃ ಬಹಳಷ್ಟು ಜನರನ್ನು ಹೆದರಿಸಿದೆ ಮತ್ತು ನನಗೂ ಭಯ ಕಾಡಿತ್ತು ಎಂದು ಹೇಳಿದರು. 

ಮೂರನೇ ದಿನದಾಟದ ಸಂದರ್ಭದಲ್ಲಿ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತಿದ್ದಾಗ ನನ್ನ ಎದೆಯಲ್ಲಿ ನೋವು ಕಾಣಿಸಿಕೊಂಡಿತು. ಅದರಿಂದ ಹೊರಬರಲು ಪ್ರಯತ್ನಿಸಿದೆ. ಕಾಮೆಂಟರಿ ನೀಡುತ್ತಿದ್ದ ಅಲ್ಲಿಂದ ಹೊರಬರಲು ಇಷ್ಟವಿರಲಿಲ್ಲ ಎಂದು ಅವರು ತಿಳಿಸಿದರು. ರಿಕಿ ಪಾಟಿಂಗ್ ಆಸ್ಪತ್ರೆ ಸೇರುವ ಮುನ್ನ ಟೀಮ್ ಡಾಕ್ಟರ್ ಲೇಘ್ ಗೋಲ್ಡಿಂಗ್ ಅವರನ್ನು ಕಾಣಲು ಅವರ ಮಾಜಿ ಸಹೋದ್ಯೋಗಿ ಜಸ್ಟಿನ್ ಲ್ಯಾಂಗರ್ ನೆರವು ನೀಡಿದರು. ಆಸ್ಪತ್ರೆಯಲ್ಲಿ ಮಧ್ಯಾಹ್ನ ವಿರಾಮ ಪಡೆದು, ಉತ್ತಮ ನಿದ್ರೆಯೊಂದಿಗೆ ಚೇತರಿಸಿಕೊಂಡಿದ್ದಾಗಿ 47 ವರ್ಷದ ರಿಕಿ ಪಾಟಿಂಗ್ ತಿಳಿಸಿದರು.

ಶೇನ್ ವಾರ್ನ್, ರೋಡ್ ಮಾರ್ಶ್ ಮತ್ತು ರಿಯಾನ್ ಕ್ಯಾಂಬೆಲ್ ಅವರ ಸಾವಿನ ಹಿನ್ನೆಲೆಯಲ್ಲಿ ಸಾಕಷ್ಟು ನಿಗಾ ವಹಿಸಲಾಗಿತ್ತು. ನಮ್ಮ ವಯಸ್ಸಿನವರು ಆರೋಗ್ಯದ ಬಗ್ಗೆ ಜೊತೆಯಲ್ಲಿದ್ದವರೊಂದಿಗೆ ಸ್ವಲ್ಪ ಮಾತನಾಡಬೇಕು ಎಂದು ಅನಿಸುತ್ತಿದೆ ಎಂದು ರಿಕಿ ಪಾಟಿಂಗ್ ನುಡಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com