ಹೀನಾಯ ಸೋಲಿನ ಬೆನ್ನಲ್ಲೇ ಭಾರತಕ್ಕೆ ಐಸಿಸಿಯಿಂದ ಬೃಹತ್ ಮೊತ್ತದ ದಂಡ!

ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾಗೆ ಐಸಿಸಿ ಬೃಹತ್ ಮೊತ್ತದ ದಂಡ ವಿಧಿಸಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ಮೀರ್‌ಪುರ್‌: ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ನಿಧಾನಗತಿಯ ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾಗೆ ಐಸಿಸಿ ಬೃಹತ್ ಮೊತ್ತದ ದಂಡ ವಿಧಿಸಿದೆ. 

ಐಸಿಸಿಯ ಪ್ರಕಾರ, ಐಸಿಸಿ ಎಲೈಟ್ ಪ್ಯಾನೆಲ್‌ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ನಿಗದಿತ ಸಮಯದಲ್ಲಿ ಕಡಿಮೆ ಓವರ್‌ಗಳನ್ನು ಎಸೆದಿದ್ದಕ್ಕಾಗಿ ಭಾರತ ತಂಡವನ್ನು ತಪ್ಪಿತಸ್ಥರೆಂದು ಐಸಿಸಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯದ ಶುಲ್ಕದ ಶೇಕಡಾ 80ರಷ್ಟು ದಂಡ ವಿಧಿಸಲಾಗಿದೆ.

ಐಸಿಸಿ ನೀತಿ ಸಂಹಿತೆ 2.22 ಪ್ರಕಾರ ನಿಧಾನಗತಿಯ ಓವರ್​ ರೇಟ್​ ವಿಷಯದಲ್ಲಿ ಟೀಮ್ ಇಂಡಿಯಾ ತಪ್ಪಿತಸ್ಥರೆಂದು ಸಾಬೀತಾಗಿದೆ. ಅಲ್ಲದೆ ಇದನ್ನು ನಾಯಕ ರೋಹಿತ್ ಶರ್ಮಾ ಸಹ ಒಪ್ಪಿಕೊಂಡಿದ್ದಾರೆ. ಹೀಗಾಗಿ 1 ಓವರ್‌ಗೆ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. ಅದರಂತೆ 4 ಓವರ್‌ಗಳಿಗಾಗಿ ಪಂದ್ಯ ಶುಲ್ಕ ಶೇ. 80 ರಷ್ಟು ಟೀಮ್ ಇಂಡಿಯಾ ದಂಡ ಪಾವತಿಸಬೇಕಾಗಿದೆ.

ಮೀರ್‌ಪುರ್‌ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 186 ರನ್ ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಭಾರತ ನೀಡಿದ 187 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ 9 ವಿಕೆಟ್ ನಷ್ಟಕ್ಕೆ 187 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಇನ್ನು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com