ರಣಜಿ ಟ್ರೋಫಿ: ಪದಾರ್ಪಣೆ ಪಂದ್ಯದಲ್ಲೇ ಶತಕ, ಅಪ್ಪ ಸಚಿನ್ ದಾಖಲೆ ಸರಿಗಟ್ಟಿದ ಪುತ್ರ ಅರ್ಜುನ್ ತೆಂಡೂಲ್ಕರ್!

ಹಾಲಿ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಪಂದ್ಯದಲ್ಲೇ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಶತಕ ಸಿಡಿಸಿ ತಮ್ಮ ತಂದೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅರ್ಜುನ್ ತೆಂಡೂಲ್ಕರ್
ಅರ್ಜುನ್ ತೆಂಡೂಲ್ಕರ್

ಮುಂಬೈ: ಹಾಲಿ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಪಂದ್ಯದಲ್ಲೇ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಶತಕ ಸಿಡಿಸಿ ತಮ್ಮ ತಂದೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ಹೌದು..  ರಣಜಿ ಟ್ರೋಫಿ ಪಂದ್ಯದಲ್ಲಿ ಅವರು ಬುಧವಾರ ಗೋವಾ ಪರ ಆಡುವಾಗ ರಾಜಸ್ಥಾನ ವಿರುದ್ಧ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ ಅರ್ಜುನ್ ತೆಂಡೂಲ್ಕರ್, ರಣಜಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಶತಕದೊಂದಿಗೆ ತಮ್ಮ ಪ್ರಥಮ ದರ್ಜೆ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಈ ಮೂಲಕ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಸಾಧನೆಯನ್ನು ಮಗ ಅರ್ಜುನ್ ಸರಿಗಟ್ಟಿದ್ದಾರೆ. ಇದರೊಂದಿಗೆ ಚೊಚ್ಚಲ ಪಂದ್ಯದಲ್ಲೇ ದೊಡ್ಡ ಇನ್ನಿಂಗ್ಸ್ ಆಡುವ ವಿಚಾರದಲ್ಲಿ ತಂದೆ ಸಚಿನ್ ತೆಂಡೂಲ್ಕರ್ ಅವರನ್ನೂ ಹಿಂದಿಕ್ಕಿದ್ದಾರೆ.  23 ವರ್ಷದ ಅರ್ಜುನ್ 178 ಎಸೆತಗಳಲ್ಲಿ ಶತಕ ಪೂರೈಸಿದ್ದು, ಅವರ ಈ ಅದ್ಭುತ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು. ಗೋವಾ ಕೂಡ ಮೊದಲ ಇನಿಂಗ್ಸ್‌ನಲ್ಲಿ 400 ರನ್ ಗಳಿಸಿದೆ.

ಸಚಿನ್ ತೆಂಡೂಲ್ಕರ್ 1988 ರಲ್ಲಿ ಗುಜರಾತ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 100 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಸಚಿನ್‌ಗೆ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ.  ಸಚಿನ್​  129 ಎಸೆತಗಳಲ್ಲಿ ಶತಕ ಗಳಿಸಿದರು. 12 ಬೌಂಡರಿಗಳನ್ನು ಬಾರಿಸಿದ್ದರು. ಬಾಂಬೆ ಮತ್ತು ಗುಜರಾತ್ ನಡುವೆ 3 ದಿನಗಳ ಪಂದ್ಯ ಡ್ರಾದಲ್ಲಿ ಅಂತ್ಯವಾಗಿತ್ತು. ಇದೀಗ ತಮ್ಮ ತಂದೆಯ ಹಾದಿಯಲ್ಲೇ ಸಾಗಿರುವ ಅರ್ಜುನ್ ತೆಂಡೂಲ್ಕರ್ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 104 ರನ್ ಗಳಿಸಿದ್ದಾರೆ. 
ಇದೀಗ ರಣಜಿ ಟ್ರೋಫಿಯ ಲೀಗ್ ಸುತ್ತನ್ನು 3ರ ಬದಲು 4 ದಿನಗಳ ಕಾಲ ನಡೆಸಲಾಗುತ್ತಿದೆ.

ಮೊದಲ ದಿನ ರಾಜಸ್ಥಾನವು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲ ದಿನದಾಟದ ಅಂತ್ಯಕ್ಕೆ ಗೋವಾ 5 ವಿಕೆಟ್‌ಗೆ 210 ರನ್ ಗಳಿಸಿತ್ತು. ಈ ಪೈಕಿ ಅರ್ಜುನ್ ತೆಂಡೂಲ್ಕರ್ 4 ರನ್ ಗಳಿಸಿ ಅಜೇಯರಾಗುಳಿದಿದ್ದರು. ಅವರು ಆರನೇ ವಿಕೆಟ್‌ಗೆ ಸುಯಶ್ ಪ್ರಭುದೇಸಾಯಿ ಅವರೊಂದಿಗೆ 150 ಕ್ಕೂ ಹೆಚ್ಚು ರನ್‌ಗಳ ಅಜೇಯ ಜೊತೆಯಾಟವನ್ನು ಆಡಿದರು. ಈ ಮೂಲಕ ಗೋವಾ ತಂಡ ಬೃಹತ್​ ಮೊತ್ತ ಕಲೆಹಾಕಿದೆ. 

23 ವರ್ಷದ ಅರ್ಜುನ್ ತೆಂಡೂಲ್ಕರ್ ಬಗ್ಗೆ ನೋಡುವುದಾದರೆ, ಅವರು ಆಲ್ ರೌಂಡರ್ ಆಗಿದ್ದು, ಅವರು ಎಡಗೈ ವೇಗದ ಬೌಲರ್ ಕೂಡ ಹೌದು. ಇದುವರೆಗೆ 9 ಟಿ20 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. 10 ರನ್‌ಗೆ 4 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ. ಅದೇ ಸಮಯದಲ್ಲಿ, ಅವರು ಲಿಸ್ಟ್-ಎ ಕ್ರಿಕೆಟ್‌ನ 7 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. 32 ರನ್ ನೀಡಿ 2 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com