ಅಂಧರ T20 ವಿಶ್ವಕಪ್ 2022: ಬಾಂಗ್ಲಾವನ್ನು ಸೋಲಿಸಿ ಸತತ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ!
ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಅಂಧರ ಟಿ20 ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿದೆ.
Published: 17th December 2022 05:01 PM | Last Updated: 17th December 2022 05:12 PM | A+A A-

ಟೀಂ ಇಂಡಿಯಾ
ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಅಂಧರ ಟಿ20 ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 120 ರನ್‌ಗಳ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 2 ವಿಕೆಟ್ ನಷ್ಟಕ್ಕೆ 277 ರನ್ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೀಂ ಇಂಡಿಯಾ ಅಂಧರ ಟಿ20 ವಿಶ್ವಕಪ್ 2022 ವಶಪಡಿಸಿಕೊಂಡಿದೆ.
ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿರುವುದು ಇದು ಮೂರನೇ ಬಾರಿಗೆ. ಅದಕ್ಕೂ ಮೊದಲು 2012 ಮತ್ತು 2017ರಲ್ಲಿ ಅಂಧರ ಟೀಮ್ ಇಂಡಿಯಾ ಈ ಪಂದ್ಯಾವಳಿಯನ್ನು ಗೆದ್ದಿತ್ತು.
ಇದನ್ನೂ ಓದಿ: ಅಂತಿಮಘಟ್ಟದಲ್ಲಿ ಟೆಸ್ಟ್: 4ನೇ ದಿನಕ್ಕೆ ಬಾಂಗ್ಲಾದೇಶ ಸ್ಕೋರ್ 272/6, ಪಂದ್ಯ ಗೆಲ್ಲಲು ಭಾರತಕ್ಕೆ 4 ವಿಕೆಟ್ ಅಗತ್ಯ!
ಈ ಪಂದ್ಯದಲ್ಲಿ ಭಾರತದಿಂದ ಎರಡು ಶತಕಗಳು ಬಂದಿವೆ. ಸುನಿಲ್ ರಮೇಶ್ 63 ಎಸೆತಗಳಲ್ಲಿ 136 ರನ್ ಗಳಿಸಿದರು. ನಾಯಕ ಅಜಯ್ ರೆಡ್ಡಿ 50 ಎಸೆತಗಳಲ್ಲಿ 100 ರನ್ ಗಳಿಸಿದ್ದಾರೆ.
ಈ ಬಾರಿ ಭಾರತವು ಈ ವಿಶ್ವಕಪ್‌ನ ಆತಿಥ್ಯ ವಹಿಸಿತ್ತು. ಆದರೆ ಈಗ ಮುಂದಿನ ವಿಶ್ವಕಪ್ 2024ರಲ್ಲಿ ನಡೆಯಲಿದೆ. ಈ ವಿಶ್ವಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ಆಟಗಾರರ ವೀಸಾ ಕುರಿತು ಸಾಕಷ್ಟು ವಿವಾದಗಳು ನಡೆದಿವೆ.
History Defending Champions India retains the #T20WorldCup in Blind Cricket. Their third straight WC trophy pic.twitter.com/vIQXCKSmmG
— Doordarshan Sports (@ddsportschannel) December 17, 2022