ಟಿ20 ವಿಶ್ವಕಪ್: ಕೇವಲ 5 ನಿಮಿಷದಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡೌಟ್!
2022ರ ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆ ಪಂದ್ಯಾವಳಿಯ ಟಿಕೆಟ್ ಬುಕಿಂಗ್ ಅನ್ನು ಸಾರ್ವಜನಿಕರಿಗೆ ಬಿಡಲಾಗಿದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಟಿಕೆಟ್ಗಳು ಕೇವಲ ಐದು ನಿಮಿಷದಲ್ಲಿ ಬಿಕರಿಯಾಗಿದೆ.
Published: 08th February 2022 03:54 PM | Last Updated: 08th February 2022 04:41 PM | A+A A-

ಸಂಗ್ರಹ ಚಿತ್ರ
ನವದೆಹಲಿ: 2022ರ ಟಿ20 ವಿಶ್ವಕಪ್ ಟೂರ್ನಿಯ ಹಿನ್ನೆಲೆ ಪಂದ್ಯಾವಳಿಯ ಟಿಕೆಟ್ ಬುಕಿಂಗ್ ಅನ್ನು ಸಾರ್ವಜನಿಕರಿಗೆ ಬಿಡಲಾಗಿದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಟಿಕೆಟ್ಗಳು ಕೇವಲ ಐದು ನಿಮಿಷದಲ್ಲಿ ಬಿಕರಿಯಾಗಿದೆ.
ಅಕ್ಟೋಬರ್ 23 ರಂದು MCG ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಾಗೂ ಅಕ್ಟೋಬರ್ 27ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಭಾರತದ ಎರಡನೇ ಪಂದ್ಯದ ಟಿಕೆಟ್ಗಳು ಈಗಾಗಲೇ ಬುಕ್ ಆಗಿರುವುದರಿಂದ ಭಾರತ ಪಂದ್ಯಗಳ ಮೇಲೆ ಕ್ರಿಕೆಟ್ ಅಭಿಮಾನಿಗಳ ಕ್ರೇಜ್ ಎಷ್ಟಿದೆ ಎಂಬುದನ್ನು ಅಂದಾಜಿಸಬಹುದು.
ಕಳೆದ ಬಾರಿ ವಿಶ್ವಕಪ್ನಲ್ಲಿ ಭಾರತವನ್ನು ಪಾಕಿಸ್ತಾನ 10 ವಿಕೆಟ್ಗಳಿಂದ ಸೋಲಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವೆ ದೀರ್ಘಕಾಲದಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಆದರೆ, ಕಳೆದ ಬಾರಿ ಐಸಿಸಿ ಟಿ20 ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ಎರಡೂ ದೇಶಗಳು ಮುಖಾಮುಖಿಯಾಗಿದ್ದವು. ಆಗ ಭಾರತವನ್ನು ಪಾಕಿಸ್ತಾನ 10 ವಿಕೆಟ್ಗಳಿಂದ ಸೋಲಿಸಿತು.
ಅಕ್ಟೋಬರ್ 30ರಂದು ಪರ್ತ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಸುಮಾರು 90,000 ಜನರು ವೀಕ್ಷಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ 2022 ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 23ರಂದು ಪಾಕ್ ಜೊತೆ ಟೀಂ ಇಂಡಿಯಾ ಮೊದಲ ಪಂದ್ಯ!
ಟಿಕೆಟ್ ಸೋಲ್ಡೌಟ್ ಬಗ್ಗೆ ಮಿಚೆಲ್ ಎನ್ರೈಟ್ ಮಾತನಾಡಿದ್ದು, ಇಲ್ಲಿಯವರೆಗೆ ನಮ್ಮ ಟಿಕೆಟ್ ಖರೀದಿದಾರರು ಪ್ರಾಥಮಿಕವಾಗಿ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ, ಸಾಮಾನ್ಯ ಟಿಕೆಟ್ ಹಂಚಿಕೆಯೊಂದಿಗೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾದ ಎಲ್ಲಾ ಟಿಕೆಟ್ಗಳ ಮಾರಾಟವು ಕ್ರಿಕೆಟ್ಗೆ ಹೆಚ್ಚುತ್ತಿರುವ ಉತ್ಸಾಹವನ್ನು ತೋರಿಸುತ್ತದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಜಿಲಾಂಗ್ನ ಸಿಮಂಡ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಎಲ್ಲಾ ಟಿಕೆಟ್ಗಳು ಮಾರಾಟವಾದ ನಂತರ ಟ್ವಿಟರ್ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.