
ಶ್ರೇಯಸ್ ಅಯ್ಯರ್-ರಿಷಬ್ ಪಂತ್
ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 265 ರನ್ ಗಳಿಗೆ ಆಲೌಟ್ ಆಗಿದೆ.
ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ 80 ಹಾಗೂ ರಿಷಬ್ ಪಂತ್ 56 ರನ್ ಪೇರಿಸಿದ್ದು ಭಾರತ 250 ಗಡಿ ದಾಟಲು ಸಾಧ್ಯವಾಯಿತು.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 13, ಶಿಖರ್ ಧವನ್ 10, ವಿರಾಟ್ ಕೊಹ್ಲಿ 0, ವಾಷಿಂಗ್ಟನ್ ಸುಂದರ್ 33, ದೀಪಕ್ ಚಹಾರ್ 38 ರನ್ ಪೇರಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಬೌಲಿಂಗ್ ನಲ್ಲಿ ಜೇಸನ್ ಹೋಲ್ಡರ್ 4, ಜೋಸೆಫ್ ಮತ್ತು ವಾಲ್ಶ್ ತಲಾ 2 ವಿಕೆಟ್ ಪಡೆದಿದ್ದರೆ ಸ್ಮಿತ್ ಮತ್ತು ಅಲೆನ್ ತಲಾ 1 ವಿಕೆಟ್ ಪಡೆದಿದ್ದಾರೆ.