ಐಪಿಎಲ್ ಮೆಗಾ ಹರಾಜು: ಮಾರಾಟವಾಗದೆ ಉಳಿದ ಆಟಗಾರರು ಯಾರು ಗೊತ್ತಾ?
ಇಂಡಿಯನ್ ಪ್ರೀಮಿಯರ್ ಲೀಗ್ 2022(IPL 2022)ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಇದುವರೆಗೆ ಏಳು ಆಟಗಾರರು 10 ಕೋಟಿ ಹಾಗೂ 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ.
Published: 12th February 2022 06:58 PM | Last Updated: 12th February 2022 06:58 PM | A+A A-

ಸುರೇಶ್ ರೈನಾ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2022(IPL 2022)ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಇದುವರೆಗೆ ಏಳು ಆಟಗಾರರು 10 ಕೋಟಿ ಹಾಗೂ 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ.
ಇನ್ನು ಕೆಲವರು 4, 5, 6 ಹೀಗೆ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಆದರೆ ಹರಾಜಿನಲ್ಲಿ ಕೆಲವರ ಹೆಸರನ್ನು ನಮೂದಿಸಿದರೂ ಸಹ ಅವರನ್ನು ಯಾರು ಖರೀದಿ ಮಾಡಲಿಲ್ಲ. ಶನಿವಾರ ಖರೀದಿಯಾಗದ ಆಟಗಾರರು ಭಾನುವಾರ ಖರೀದಿಯಾಗುವ ಸಾಧ್ಯತೆ ಇದೆ. ಹಾಗಾದರೆ ಯಾರು ಯಾರು ಶನಿವಾರದ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಲಿಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ.
ಇದನ್ನು ಓದಿ: ಐಪಿಎಲ್ ಹರಾಜು ಪ್ರಕ್ರಿಯೆ ವೇಳಿ ಕುಸಿದು ಬಿದ್ದ ಹರಾಜುದಾರ ಹಗ್ ಎಡ್ಮೀಡ್ಸ್!
ಅಫ್ಘಾನಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನಬಿ ಅವರು ಯಾವ ತಂಡಕ್ಕೂ ಆಯ್ಕೆಯಾಗಿಲ್ಲ. ಅವರು ಕಳೆದ ಕೆಲವು ವರ್ಷಗಳಿಂದ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಭಾನುವಾರದ ತ್ವರಿತ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಆಯ್ಕೆ ಮಾಡಬಹುದು.
ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅನ್ ಸೋಲ್ಡ್ ಆಗಿದ್ದಾರೆ
ಸುರೇಶ್ ರೈನಾ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇಬ್ಬರೂ ಸ್ಟಾರ್ಗಳು ತಮ್ಮ ಮೂಲ ಬೆಲೆಗೆ ಮಾರಾಟವಾಗದೆ ಹಾಗೇ ಉಳಿದಿದ್ದಾರೆ.
ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಮೆಗಾ ಹರಾಜಿನಲ್ಲಿ ಯಾರೂ ಅವರನ್ನು ಬಿಡ್ ಮಾಡದ ಕಾರಣ ಮಾರಾಟವಾಗಲಿಲ್ಲ.
ಉಮೇಶ್ ಯಾದವ್ ಮಾರಾಟವಾಗಲಿಲ್ಲ
ಆಸ್ಟ್ರೇಲಿಯನ್ ಸ್ಪಿನ್ನರ್ ಆಡಮ್ ಝಂಪಾ ಮಾರಾಟವಾಗದೆ ಉಳಿದಿದ್ದಾರೆ.
ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರನ್ನು ಆಯ್ಕೆ ಮಾಡಿಲ್ಲ
ಅಫ್ಘಾನಿಸ್ತಾನದ ಮಿಸ್ಟರಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಮಾರಾಟವಾಗದೆ ಉಳಿದಿದ್ದಾರೆ.
ಸ್ಪಿನ್ನರ್ ಆದಿಲ್ ರಶೀದ್ ಮಾರಾಟವಾಗಲಿಲ್ಲ.