ಐಪಿಎಲ್ ನಲ್ಲಿ ಖರೀದಿಯಾಗದ ಶಕೀಬ್ ಅಲ್ ಹಸನ್: ಶಕೀಬ್ ಪತ್ನಿ ಶಿಶಿರ್ ಹೇಳಿದ್ದೇನು?
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ವಯಸ್ಸಾದ ಅನುಭವಿ ಆಟಗಾರರ ಬಗ್ಗೆ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎಂಬುದು ತಿಳಿದಿರುವ ಸಂಗತಿ. ಶಕೀಬ್ ಅಲ್ ಹಸನ್ ಸೇರಿದಂತೆ ಆಸ್ಟ್ರೇಲಿಯಾ ವೈಟ್ ಬಾಲ್ ನಾಯಕ ಆ್ಯರೋನ್ ಫಿಂಚ್...
Published: 15th February 2022 09:11 PM | Last Updated: 16th February 2022 01:24 PM | A+A A-

ಶಕೀಬ್ ಅಲ್ ಹಸನ್-ಶಿಶಿರ್
ಢಾಕಾ: ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ವಯಸ್ಸಾದ ಅನುಭವಿ ಆಟಗಾರರ ಬಗ್ಗೆ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎಂಬುದು ತಿಳಿದಿರುವ ಸಂಗತಿ. ಶಕೀಬ್ ಅಲ್ ಹಸನ್ ಸೇರಿದಂತೆ ಆಸ್ಟ್ರೇಲಿಯಾ ವೈಟ್ ಬಾಲ್ ನಾಯಕ ಆ್ಯರೋನ್ ಫಿಂಚ್, ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಜೊತೆಗೆ ಸುರೇಶ್ ರೈನಾ, ಸ್ಟೀವ್ ಸ್ಮಿತ್, ಪೂಜಾರ, ಅಮಿತ್ ಮಿಶ್ರಾ, ಆದಿಲ್ ರಶೀದ್, ಇಮ್ರಾನ್ ತಾಹಿರ್ ಮುಂತಾದವರು ಹರಾಜಿನಲ್ಲಿ ಸೇಲ್ ಆಗದೆ ಉಳಿದ್ದಿದ್ದಾರೆ.
ಹರಾಜಿನ ನಂತರ ಈ ಕೆಲವು ಆಟಗಾರರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬುದಕ್ಕೆ ಹಲವಾರು ಫ್ರಾಂಚೈಸಿಗಳು ವಿವರಣೆಯನ್ನು ಸಹ ನೀಡಿವೆ. ಇತ್ತೀಚೆಗೆ, ಸ್ಟಾರ್ ಆಲ್ರೌಂಡರ್, ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್ ಬಗ್ಗೆ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ಅವರು ಮೆಗಾ ಹರಾಜಿನಲ್ಲಿ ಮಾರಾಟವಾಗದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಕಾರಣಗಳನ್ನು ವಿವರಿಸುತ್ತಾರೆ.
ಶಕೀಬ್ ಐಪಿಎಲ್ ಸೀರಿಸ್ ಗೆ ಸಂಪೂರ್ಣ ಲಭ್ಯವಿರುತ್ತಾರಾ ಅಥವಾ ಇಲ್ಲವ ಎಂದು ತಿಳಿಯಲು ಕೆಲವು ಫ್ರಾಂಚೈಸಿಗಳು ಮೆಗಾ ಹರಾಜಿನ ಮೊದಲು ಶಕೀಬ್ ಅವರನ್ನು ಸಂಪರ್ಕಿಸಿದ್ದವು. ಶ್ರೀಲಂಕಾದೊಂದಿಗೆ ಸೀರಿಸ್ ಇರುವ ಕಾರಣದಿಂದಾಗಿ ಲಭ್ಯ ಸಾಧ್ಯವಿಲ್ಲವೆಂದು ಐಪಿಎಲ್ಗೆ ಮೊದಲೇ ನೋ ಎಂದು ಶಕೀಬ್ ತಿಳಿಸಿದ ಕಾರಣದಿಂದಾಗಿ ಹರಾಜಿನಲ್ಲಿ ಫ್ರಾಂಚೈಸಿಗಳು ಕೊಂಡುಕೊಳ್ಳಲು ಮುಂದೆ ಬರಲಿಲ್ಲ ಎಂದು ಶಿಶಿರ್ ವಿವರಿಸಿದರು.
ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜು: ಮಾರಾಟವಾಗದ ಆಟಗಾರರಿಗೆ ಮತ್ತೊಂದು ಅವಕಾಶ, ಹೇಗೆ ಗೊತ್ತಾ?
ಹರಾಜಿನಲ್ಲಿ ಮಾರಾಟವಾಗದಿರುವುದು ದೊಡ್ಡ ತಪ್ಪಲ್ಲ ಮತ್ತು ಶಕೀಬ್ಗೆ ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದು ತಮ್ಮ ಪತಿಗೆ ಬೆಂಬಲವಾಗಿ ಹೇಳಿಕೆ ನೀಡಿದರು. ಶ್ರೀಲಂಕಾ ಸರಣಿಯಿಂದ ಹೊರಗುಳಿದೂ ಐಪಿಎಲ್ನಲ್ಲಿ ಆಡಲು ಬಯಸಿದರೆ ಶಕೀಬ್ ಅದನ್ನು ಮಾಡಬಹುದಿತ್ತು ಆದರೆ ಹಣಕ್ಕಿಂತ ಹೆಚ್ಚಾಗಿ ದೇಶಕ್ಕಾಗಿ ಆಡುವುದನ್ನು ಅವರು ಗೌರವವೆಂದು ಪರಿಗಣಿಸಿದ್ದಾರೆ. ಎಂದು ಶಿಶಿರ್ ಹೇಳಿಕೊಂಡಿದ್ದಾರೆ.
ವಾಸ್ತವವಾಗಿ ಬಾಂಗ್ಲಾದೇಶ ಮಾರ್ಚ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಮಾರ್ಚ್ 18 ರಿಂದ ಪ್ರಾರಂಭವಾಗುವ ಪ್ರವಾಸದಲ್ಲಿ ಬಾಂಗ್ಲಾದೇಶ ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಕ್ಕೂ ಮೊದಲು 2021 ರ ಐಪಿಎಲ್ ಸೀಸನ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಶಕೀಬ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರೊಂದಿಗೆ ಈ ವರ್ಷದ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಹೆಚ್ಚಿನ ಆಸಕ್ತಿ ತೋರಲಿಲ್ಲ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ.