ಐಪಿಎಲ್ ಗುಂಗು; ರಾಷ್ಟ್ರೀಯ ತಂಡದಲ್ಲಿ ಆಡುವಾಗ ಆಟಗಾರರಲ್ಲಿ ಅನಾಸಕ್ತಿ: ಸುನಿಲ್ ಗವಾಸ್ಕರ್
ಭಾರತೀಯ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಕೆಲವು ಕ್ರಿಕೆಟಿಗರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಐಪಿಎಲ್ ಗುಂಗಿನಲ್ಲಿ ಆಟಗಾರರು ದೇಶವನ್ನು ಪ್ರತಿನಿಧಿಸುವಾಗ ಶ್ರಮಿಸುವುದಿಲ್ಲ ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 17th February 2022 05:30 PM | Last Updated: 17th February 2022 06:40 PM | A+A A-

ಸುನಿಲ್ ಗವಾಸ್ಕರ್ (ಸಂಗ್ರಹ ಚಿತ್ರ)
ನವದೆಹಲಿ: ಭಾರತೀಯ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಕೆಲವು ಕ್ರಿಕೆಟಿಗರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಐಪಿಎಲ್ ಗುಂಗಿನಲ್ಲಿ ಆಟಗಾರರು ದೇಶವನ್ನು ಪ್ರತಿನಿಧಿಸುವಾಗ ಶ್ರಮಿಸುವುದಿಲ್ಲ ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಒಐ ಗೆ ಬರೆದಿರುವ ಅಂಕಣದಲ್ಲಿ "ಐಪಿಎಲ್ ಹರಾಜು ಎಲ್ಲಾ ಆಟಗಾರರಿಗೂ ಜೀವನವನ್ನೇ ಬದಲಾಯಿಸುವುದಾಗಿದೆ. ಈ ಕಾರಣದಿಂದ ಐಪಿಎಲ್ ಇರುವಾಗ ದೇಶಕ್ಕಾಗಿ ಶ್ರಮಿಸಿ ಆಡದಂತೆ ಆಟಗಾರರನ್ನು ಮಾಡುತ್ತದೆ ಎಂದು ಗವಾಸ್ಕರ್ ಬರೆದಿದ್ದಾರೆ.
ಇದನ್ನೂ ಓದಿ: ಐಪಿಎಲ್ 2022: ಆರ್ಸಿಬಿ ಜೊತೆಗಿನ ಒಡನಾಟ ನೆನೆದು ಭಾವುಕರಾದ ವಿರಾಟ್ ಕೊಹ್ಲಿ
ಮುಂದುವರೆದು, ಐಪಿಎಲ್ ಹೊರತಾದ ಪಂದ್ಯಗಳಲ್ಲಿ ಶ್ರಮ ವಹಿಸಿ ಪೆಟ್ಟಾದರೆ ಐಪಿಎಲ್ ಟೂರ್ನಿಯಲ್ಲಿ ಫಿಟ್ ಆಗಿರಲು ಸಾಧ್ಯವಿಲ್ಲ ಎಂಬುದಕ್ಕಾಗಿ ಈ ರೀತಿಯ ಧೋರಣೆ ಅನುಸರಿಸುತ್ತಿದ್ದಾರೆ.
ಇನ್ನು ಐಪಿಎಲ್ ನಲ್ಲಿ ಹರಾಜಾಗದೇ ಉಳಿದ ಆಟಗಾರರ ಬಗ್ಗೆಯೂ ಗವಾಸ್ಕರ್ ಮಾತನಾಡಿದ್ದು, ಬಿಕರಿಯಾಗದೇ ಉಳಿದ ಆಟಗಾರರು ನಿರಾಶರಾಗಬಾರದು, ಬದಲಿ ಆಟಗಾರನಿಗೆ ಎಂದಿಗೂ ಅವಕಾಶವಿರಲಿದೆ ಎಂದು ಹೇಳಿದ್ದಾರೆ.
"ಬಿಕರಿಯಾಗದೇ ಉಳಿದ ದುರದೃಷ್ಟಶಾಲಿಗಳಿಗೆ, ಫ್ರಾಂಚೈಸಿಗಳು ಇವರನ್ನು ತೆಗೆದುಕೊಳ್ಳದೇ ತಪ್ಪು ಮಾಡಿದೆವು ಎಂಬುದನ್ನು ಸಾಬೀತುಪಡಿಸುವ ಅವಕಾಶ ಇದೆ" ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.