
ರೋಹಿತ್ ಶರ್ಮಾ
ಲಖನೌ: ನಿರಂತರವಾಗಿ ಕ್ಯಾಚ್ ಗಳನ್ನು ಕೈಚೆಲ್ಲಿರುತ್ತಿರುವ ಟೀಂ ಇಂಡಿಯಾದ ಫೀಲ್ಡಿಂಗ್ ಕೌಶಲ್ಯ ಸುಧಾರಿಸಬೇಕಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಗುರುವಾರ ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಬಾರಿಸುವ ಮೊದಲು ಸಂಯೋಜಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ಶ್ರೀಲಂಕಾವನ್ನು ಸೋಲಿಸಿತು.
ಇದನ್ನೂ ಓದಿ: ಮೊದಲ ಟಿ20: ಪ್ರವಾಸಿ ಲಂಕಾ ವಿರುದ್ಧ 62 ರನ್ ಗಳಿಂದ ಗೆದ್ದ ಟೀಂ ಇಂಡಿಯಾ
ಇದು ನಿರಂತರವಾಗಿ ಆಗುತ್ತಿದೆ. ಸುಲಭ ಕ್ಯಾಚ್ ಗಳನ್ನು ಕೈಚೆಲ್ಲುತ್ತಿದ್ದೇವೆ. ನಮ್ಮ ಫೀಲ್ಡಿಂಗ್ ಕೋಚ್ ಕೆಲವು ಕೆಲಸ ಮಾಡಬೇಕಾಗಿದೆ. ಆಸ್ಟ್ರೇಲಿಯಾ ರೀತಿಯಲ್ಲಿ ಅತ್ಯುತ್ತಮ ಫೀಲ್ಡಿಂಗ್ ಕೌಶಲ್ಯವನ್ನು ನಾವು ಬಯಸುವುದಾಗಿ ಪಂದ್ಯ ಮುಗಿದ ನಂತರ ನಡೆದ ಸಮಾರಂಭದಲ್ಲಿ ರೋಹಿತ್ ಶರ್ಮಾ ಹೇಳಿದರು.
ಶ್ರೀಲಂಕಾ ವಿರುದ್ಧ 62 ರನ್ ಗಳ ಅಂತರದಿಂದ ಗೆಲುವು ಸಾಧಿಸಿದ ಟೀಂ ಇಂಡಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಉಭಯ ತಂಡಗಳು ಶನಿವಾರ ನಡೆಯಲಿರುವ ಎರಡನೇ ಟಿ-20 ಪಂದ್ಯದತ್ತ ಚಿತ್ತ ಹರಿಸಿವೆ.