ಗಾಯದ ಸಮಸ್ಯೆ: ಋತುರಾಜ್ ಶ್ರೀಲಂಕಾ ಟಿ20 ಸರಣಿಗೆ ಅಲಭ್ಯ
ಭಾರತದ ಪ್ರಾರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಗೆ ಕೈ ಗಾಯದ ಸಮಸ್ಯೆ ಕಾಡುತ್ತಿದ್ದು, ಶ್ರೀಲಂಕಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
Published: 26th February 2022 03:29 PM | Last Updated: 26th February 2022 03:29 PM | A+A A-

ಋತುರಾಜ್
ಧರ್ಮಶಾಲ: ಭಾರತದ ಪ್ರಾರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಗೆ ಕೈ ಗಾಯದ ಸಮಸ್ಯೆ ಕಾಡುತ್ತಿದ್ದು, ಶ್ರೀಲಂಕಾ ವಿರುದ್ಧ ಟಿ20 ಅಂತಾರಾಷ್ಟ್ರೀಯ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಋತುರಾಜ್ ಅಲಭ್ಯತೆ ಹಿನ್ನೆಲೆಯಲ್ಲಿ ಬಿಸಿಸಿಐ ಮಯಾಂಕ್ ಅಗರ್ವಾಲ್ ಅವರನ್ನು ಉಳಿದ ಪಂದ್ಯಗಳಿಗೆ ತಂಡಕ್ಕೆ ಸೇರಿಸಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ 1-0 ಮುನ್ನಡೆ ಸಾಧಿಸಿದ್ದು, ಎರಡನೇ ಪಂದ್ಯ ಶನಿವಾರ ಧರ್ಮಶಾಲಾದಲ್ಲಿ ನಡೆಯಲಿದೆ.ಅಭ್ಯಾಸದ ವೇಳೆ ಋತುರಾಜ್ ಕೈಗೆ ಪೆಟ್ಟಾಗಿದ್ದರ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಮೊದಲ ಟಿ20 ಪಂದ್ಯಕ್ಕೂ ಅವರು ಅಲಭ್ಯರಾಗಿದ್ದರು.
ಲಖನೌ ನಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಋತುರಾಜ್ ಬಲ ಮಣಿಕಟ್ಟಿನಲ್ಲಿ ನೋವು ಕಾಣಿಸಿಕೊಂಡಿತ್ತು. ಬಿಸಿಸಿಐ ನ ವೈದ್ಯಕೀಯ ತಂಡ ತಪಾಸಣೆ ನಡೆಸಿದ್ದು, ಗಾಯದ ಚಿಕಿತ್ಸೆಗಾಗಿ ಎನ್ ಸಿಎ ಗೆ ತೆರಳಲಿದ್ದಾರೆ" ಎಂದು ಬಿಸಿಸಿಐ ತಿಳಿಸಿದೆ. ಋತುರಾಜ್ ಗೆ ಎಂಆರ್ ಐ ಸ್ಕ್ಯಾನ್ ಮಾಡಲಾಗಿದ್ದು, ಟೆಸ್ಟ್ ತಂಡದಲ್ಲಿದ್ದ ಮಯಾಂಕ್ ಅವರನ್ನು ಟಿ20 ತಂಡಕ್ಕೂ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಹೇಳಿದೆ.