
ಮಯಾಂಕ್ ಅಗರ್ವಾಲ್
ಮುಂಬೈ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಬೆದರಿಕೆ ಹಾಕಿದ್ದ ಪತ್ರಕರ್ತನ ಹೆಸರು ಬಹಿರಂಗಪಡಿಸಲ್ಲ: ವೃದ್ಧಿಮಾನ್ ಸಾಹಾ
ಐಪಿಎಲ್ 2022ರ ಮೆಗಾ ಹರಾಜಿನ ಮೊದಲು ಪಂಜಾಬ್ ಕಿಂಗ್ಸ್ ಉಳಿಸಿಕೊಂಡ ಇಬ್ಬರು ಆಟಗಾರರಲ್ಲಿ ಮಯಾಂಕ್ ಒಬ್ಬರಾಗಿದ್ದು, ಇದೀಗ ಅವರನ್ನೇ ತಂಡದ ನಾಯಕರನ್ನಾಗಿ ತಂಡದ ಮ್ಯಾನೇಜ್ ಮೆಂಟ್ ಆಯ್ಕೆ ಮಾಡಿದೆ. ಕೆ ಎಲ್ ರಾಹುಲ್ ಲಕ್ನೋ ತಂಡಕ್ಕೆ ನಾಯಕರಾಗಿ ಘೋಷಣೆಯಾದ ನಂತರ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ 15ನೇ ಐಪಿಎಲ್ ಸರಣಿಗೆ ನಾಯಕರನ್ನಾಗಿ ಘೋಷಿಸಿದೆ.
ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜು 2022: ಮೊದಲ ದಿನ ಖರೀದಿಯಾದ ಆಟಗಾರರ ಸಂಪೂರ್ಣ ಪಟ್ಟಿ!
ಮಯಾಂಕ್ ಅಗರ್ವಾಲ್ ನೇಮಕಾತಿ ಕುರಿತು ಮಾತನಾಡಿದ ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ, “ಮಯಾಂಕ್ 2018 ರಿಂದ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಕಳೆದ ಎರಡು ವರ್ಷಗಳಿಂದ ನಾಯಕತ್ವದ ಸಾಲಿನಲ್ಲಿದ್ದಾರೆ. ನಾವು ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ ಹೊಸ ತಂಡವನ್ನು ಆಯ್ಕೆ ಮಾಡಿದ್ದೇವೆ. ಅತ್ಯಾಕರ್ಷಕ ಯುವ ಪ್ರತಿಭೆಗಳು ಮತ್ತು ಅತ್ಯುತ್ತಮ ಅನುಭವಿ ಆಟಗಾರರನ್ನು ತಂಡ ಹೊಂದಿದೆ. ಮಯಾಂಕ್ ಅವರ ಚುಕ್ಕಾಣಿಯಲ್ಲಿ ಭವಿಷ್ಯಕ್ಕೆ ಭದ್ರವಾದ ಅಡಿಪಾಯ ಹಾಕಲಿದ್ದೇವೆ. ಕಠಿಣ ಪರಿಶ್ರಮವಿರುವ, ಉತ್ಸಾಹಿ, ನಾಯಕನೊಂದಿಗೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ನಾಯಕನಾಗಿ ಮತ್ತು ಅವರು ಈ ತಂಡವನ್ನು ಯಶಸ್ವಿಯಾಗಿ ಕರೆದೊಯ್ಯುತ್ತಾರೆ ಎಂದು ನಂಬುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಐಪಿಎಲ್ ಹರಾಜು ಸಂತೆಯಲ್ಲಿ ದನಗಳ ಹರಾಜು ನಡೆಯುವ ರೀತಿಗಿಂತ ಹೀನಾಯವಾಗಿದೆ: ರಾಬಿನ್ ಉತ್ತಪ್ಪ
ಪಂಜಾಬ್ ಕಿಂಗ್ಸ್ ನ ನಾಯಕ ಮಯಾಂಕ್ ಅಗರ್ವಾಲ್, “ನಾನು 2018 ರಿಂದ ಪಂಜಾಬ್ ಕಿಂಗ್ಸ್ ನಲ್ಲಿದ್ದೇನೆ ಮತ್ತು ಈ ಅದ್ಭುತ ತಂಡವನ್ನು ಪ್ರತಿನಿಧಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 11 ವರ್ಷದ ಉದಯೋನ್ಮುಖ ಕ್ರಿಕೆಟಿಗನ ಚಿಕಿತ್ಸೆಗೆ ಟೀಂ ಇಂಡಿಯಾದ ಕೆಎಲ್ ರಾಹುಲ್ 31 ಲಕ್ಷ ರೂ. ನೆರವು!
ಮುಂದುವರಿದು, “ನಾನು ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ವಹಿಸಿಕೊಳ್ಳುತ್ತೇನೆ, ಆದರೆ ಅದೇ ಸಮಯದಲ್ಲಿ, ಈ ಸರಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾವು ಹೊಂದಿರುವ ಪ್ರತಿಭಾನ್ವಿತ ಆಟಗಾರರಿಂದ ನನ್ನ ಕೆಲಸ ಸುಲಭವಾಗುತ್ತದೆ ಎಂದು ನಾನು ನಂಬುತ್ತೇನೆ. ನಮ್ಮ ತಂಡದಲ್ಲಿ ಕೆಲವು ಅಪಾರ ಅನುಭವಿ ಆಟಗಾರರಿದ್ದಾರೆ. ನಾವು ಯಾವಾಗಲೂ ಪ್ರಶಸ್ತಿಯನ್ನು ಗೆಲ್ಲುವ ಭರವಸೆಯೊಂದಿಗೆ ಮೈದಾನಕ್ಕಿಳಿದಿದ್ದೇವೆ ಮತ್ತು ತಂಡವಾಗಿ ನಾವು ಮತ್ತೊಮ್ಮೆ ನಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಪಡೆದುಕೊಳ್ಳುವ ಗುರಿಯತ್ತ ಕೆಲಸ ಮಾಡುತ್ತೇವೆ. ತಂಡವನ್ನು ಮುನ್ನಡೆಸುವ ಈ ಹೊಸ ಪಾತ್ರವನ್ನು ನನಗೆ ವಹಿಸಿದ್ದಕ್ಕಾಗಿ ನಾನು ತಂಡದ ನಿರ್ವಹಣೆಗೆ ಧನ್ಯವಾದ ಹೇಳುತ್ತೇನೆ. ನಾನು ಹೊಸ ಸೀಸನ್ ಮತ್ತು ಅದರೊಂದಿಗೆ ಹೊಸ ಸವಾಲುಗಳನ್ನು ಎದುರು ನೋಡುತ್ತಿದ್ದೇನೆ, ”ಎಂದರು.
ಪಂಜಾಬ್ ಕಿಂಗ್ಸ್ ತಂಡ:
ಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಪ್ರಭ್ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್ಸ್ಟೋನ್, ಓಡಿಯನ್ ಸ್ಮಿತ್, ರಾಜ್, ಸಂದೀಪ್ ಶರ್ಮಾ, ರಾಜ್ ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅಂಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ಟೈಡೆ, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್.