2ನೇ ಟೆಸ್ಟ್: ಶಾರ್ದೂಲ್ ಮಾರಕ ಬೌಲಿಂಗ್; 229ಕ್ಕೆ ಆಫ್ರಿಕಾ ಆಲೌಟ್, 2ನೇ ದಿನದಾಟದಂತ್ಯಕ್ಕೆ ಭಾರತ 85/2
ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ.
Published: 04th January 2022 09:59 PM | Last Updated: 05th January 2022 12:44 PM | A+A A-

ಟೀಂ ಇಂಡಿಯಾ
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿದೆ.
ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 202 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾಗೆ ಶಾರ್ದೂಲ್ ಠಾಕೂರ್ ಕಂಟಕರಾದರು. ಹೌದು 7 ವಿಕೆಟ್ ಪಡೆಯುವ ಮೂಲಕ ಆಫ್ರಿಕಾ ತಂಡ 229 ರನ್ ಗಳಿಗೆ ಸರ್ವಪತನಕ್ಕೆ ಕಾರಣವಾದರು.
ಡೀನ್ ಎಲ್ಗರ್ 28, ಕೀಗನ್ ಪೀಟರ್ಸನ್ 62, ತೆಂಬಾ ಬವುಮಾ 51, ಮಾರ್ಕೋ ಜಾನ್ಸೆನ್ 21 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್ 7 ವಿಕೆಟ್, ಮೊಹಮ್ಮದ್ ಶಮಿ 2 ಮತ್ತು ಬುಮ್ರಾ 1 ವಿಕೆಟ್ ಪಡೆದಿದ್ದಾರೆ.
ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ 8 ರನ್ ಗಳಿಸಿ ಔಟಾದರೆ ಮಾಯಾಂಕ್ ಅಗರವಾಲ್ 23 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಹಿರಿಯ ಬ್ಯಾಟರ್ ಗಳಾದ ಚೇತೇಶ್ವರ ಪೂಜಾರ ಅಜೇಯ 35 ಮತ್ತು ಅಜಿಂಕ್ಯ ರಹಾನೆ 11 ರನ್ ಗಳಿಸಿದ್ದು ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ.