
ಟೀಂ ಇಂಡಿಯಾ
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 202 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾಗೆ ಶಾರ್ದೂಲ್ ಠಾಕೂರ್ ಕಂಟಕರಾದರು. ಹೌದು 7 ವಿಕೆಟ್ ಪಡೆಯುವ ಮೂಲಕ ಆಫ್ರಿಕಾ ತಂಡ 229 ರನ್ ಗಳಿಗೆ ಸರ್ವಪತನಕ್ಕೆ ಕಾರಣವಾದರು.
ಇನ್ನು 27 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಇಂದು 226 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಕೆಎಲ್ ರಾಹುಲ್ 8, ಮಾಯಾಂಕ್ ಅಗರವಾಲ್ 23, ಚೇತೇಶ್ವರ ಪೂಜಾರ 53, ಅಜಿಂಕ್ಯ ರಹಾನೆ 58, ಹನುಮ ವಿಹಾರಿ 40, ರಿಷಬ್ ಪಂತ್ 0, ರವಿಚಂದ್ರನ್ ಅಶ್ವಿನ್ 16 ಹಾಗೂ ಶಾರ್ದೂಲ್ ಠಾಕೂರ್ 28 ರನ್ ಬಾರಿಸಿದರು.
ಭಾರತ ನೀಡಿದ 240 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿತ್ತು. ಇಂದು ನಾಲ್ಕನೇ ದಿನದಾಟ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಪರ ಎಲ್ಗರ್ ಅಜೇಯ 96 ರನ್ ಹಾಗೂ ತೆಂಬಾ ಬವುಮಾ ಅಜೇಯ 23 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಎರಡನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 243 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯ ಗೆಲ್ಲುವ ಮೂಲಕ ಸಮಬಲ ಸಾಧಿಸಿವೆ.