ಟೀಮ್ ಮ್ಯಾನೇಜ್ ಮೆಂಟ್ ಯಾವಾಗಲೂ ಬೆಂಬಲ ನೀಡುತ್ತಿದೆ; ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ: ಪೂಜಾರ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಚೇತೇಶ್ವರ ಪೂಜಾರ ಅರ್ಧ ಶತಕ ಸಿಡಿಸಿದ್ದಾರೆ. ಇದು ಕಳೆದ ಕೆಲ ವರ್ಷಗಳಿಂದ ಕಳಪೆ ಫಾರ್ಮ್ ಕಾಯ್ದುಕೊಂಡಿರುವ ಚೇತೇಶ್ವರ ಪೂಜಾರ ಅವರಿಗೆ ಕೊಂಚ ಸಮಾಧಾನ ತಂದಿದೆ.
Published: 06th January 2022 11:53 AM | Last Updated: 06th January 2022 01:24 PM | A+A A-

ಚೇತೇಶ್ವರ ಪೂಜಾರ
ಜೋಹಾನ್ಸ್ ಬರ್ಗ್ : ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಚೇತೇಶ್ವರ ಪೂಜಾರ ಅರ್ಧ ಶತಕ ಸಿಡಿಸಿದ್ದಾರೆ. ಇದು ಕಳೆದ ಕೆಲ ವರ್ಷಗಳಿಂದ ಕಳಪೆ ಫಾರ್ಮ್ ಕಾಯ್ದುಕೊಂಡಿರುವ ಚೇತೇಶ್ವರ ಪೂಜಾರ ಅವರಿಗೆ ಕೊಂಚ ಸಮಾಧಾನ ತಂದಿದೆ.
ಮೂರನೇ ದಿನದಾಟದ ಬಳಿಕ ಮಾತನಾಡಿದ ಪೂಜಾರ ಕುತೂಹಲಕರಿ ಮಾತುಗಳನ್ನಾಡಿದ್ದಾರೆ. ಫಾರ್ಮ್ ನಲ್ಲಿ ಇಲ್ಲದಿದ್ದರೂ ಇಷ್ಟು ಸಮಯ ತಮ್ಮ ಬೆಂಬಲಕ್ಕೆ ನಿಂತಿರುವ ತಂಡದ ಮ್ಯಾನೇಜ್ ಮೆಂಟ್ ಗೆ ಕೃತಜ್ಞತೆ ಹೇಳಿದ್ದಾರೆ.
ಇದನ್ನೂ ಓದಿ: 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾದ ಗೆಲುವಿಗಾಗಿ ಬೇಕು 122 ರನ್!
ಕಳೆದೊಂದು ವರ್ಷದಿಂದ ತಮ್ಮ ವಿರುದ್ಧ ಬರುತ್ತಿರುವ ಟೀಕೆಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ, ಟೀಮ್ ಮ್ಯಾನೇಜ್ ಮೆಂಟ್ ಯಾವಾಗಲೂ ನನ್ನನ್ನು ಬೆಂಬಲಿಸುತ್ತದೆ. ಆದ್ದರಿಂದ ಹೊರಗಿನಿಂದ ನನ್ನ ವಿರುದ್ಧದ ಟೀಕೆಗಳಿಗೆ ಹೆದರುವುದಿಲ್ಲ ಎಂದಿದ್ದಾರೆ.
ಕೋಚಿಂಗ್ ಸಿಬ್ಬಂದಿ, ನಾಯಕ , ಆಟಗಾರರು ಎಲ್ಲರೂ ಬೆಂಬಲ ನೀಡುತ್ತಾರೆ. ನಾನು ಕಠಿಣವಾಗಿ ಆಡುತ್ತೇನೆ. ಕೆಲ ಸಂದರ್ಭಗಳಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಅಂತಹ ಸಮಯದಲ್ಲಿ ನಮ್ಮ ವಿರುದ್ಧ ಇಂತಹ ಟೀಕೆಗಳು ಸಹಜ ಎಂದು ಪೂಜಾರ ಹೇಳಿದ್ದಾರೆ. ಒಬ್ಬ ಕ್ರಿಕೆಟಿನಾಗಿ ಇವುಗಳಿಗೆ ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸ ನಾವು ಮಾಡಬೇಕು ಎಂದು ಪೂಜಾರಾ ಹೇಳಿದ್ದಾರೆ.