ಅಂಪೈರ್ ವಿರುದ್ಧ ಗರಂ: ನಿಷೇಧದ ಶಿಕ್ಷೆಗೆ ಗುರಿಯಾಗ್ತಾರಾ ವಿರಾಟ್ ಕೊಹ್ಲಿ!
ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ ಥರ್ಡ್ ಅಂಪೈರ್ ನಿರ್ಣಯದ ವಿರುದ್ದ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಮೇಲೆ ನಿಷೇಧ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
Published: 14th January 2022 08:32 PM | Last Updated: 14th January 2022 08:34 PM | A+A A-

ಕೊಹ್ಲಿ
ಸಿಡ್ನಿ: ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ ಥರ್ಡ್ ಅಂಪೈರ್ ನಿರ್ಣಯದ ವಿರುದ್ದ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ವಿರಾಟ್ ಕೊಯ್ಲಿ ಮೇಲೆ ನಿಷೇಧ ವಿಧಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
ದಕ್ಷಿಣಾ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಸಂದರ್ಭದಲ್ಲಿ ಡೀನ್ ಎಲ್ಗರ್ ಎಲ್ ಬಿ ಡಬ್ಲ್ಯುಯು ಅಪೀಲ್ ಬಗ್ಗೆ ಥರ್ಡ್ ಅಂಪೈರ್ ನಿರ್ಣಯ ವಿವಾದಾಸ್ಪದವಾಗಿದೆ. ಫೀಲ್ಡ್ ಅಂಪೈರ್ ಔಟ್ ನೀಡಿದ್ದರೂ ಬಾಲ್ ಟ್ರಾಕಿಂಗ್ ನಲ್ಲಿ ಬಾಲ್ ವಿಕೆಟ್ ಮೇಲಿನಿಂದ ಹೋಗಿದೆ ಎಂಬ ಕಾರಣದಿಂದ ಥರ್ಡ್ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಸಂಬಂಧಿತ ಅಧಿಕಾರಿಗಳ ಜತೆಗೆ ಫೀಲ್ಡ್ ಅಂಪೈರ್ ಕೂಡ ಅಚ್ಚರಿಗೊಳಗಾಗಿದ್ದರು.
ಅನಂತರ ಥರ್ಡ್ ಅಂಪೈರ್ ನಿರ್ಣಯದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕೊಹ್ಲಿ.. ಸ್ಟಂಪ್ಸ್ ಮೈಕ್ ಸಮೀಪ ತೆರಳಿ ಜೋರಾಗಿ ಕಿರು ಚಾಡಿದರು. ಕೊಹ್ಲಿ ಅವರೊಂದಿಗೆ ಅಶ್ವಿನ್, ಕೆ.ಎಲ್ ರಾಹುಲ್ ಕೂಡ ಮೈಕ್ ಬಳಿ ತೆರಳಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು.
CRICKET TODAY! Epic scenes
— RHABULA (@SportsInterval) January 13, 2022
Marais Erasmus - "That's Impossible."
Virat Kohli - "Focus on your team as well while they shine the ball eh? Not just the oppositions. Trying to catch people all the time."
KL Rahul - "Whole country playing against 11 guys." pic.twitter.com/wxE9kznAkN
ಆದರೆ, ಅಂಪೈರ್ ಉದ್ದೇಶಿಸಿ ಕೊಯ್ಲಿ ನೀಡಿದ ಹೇಳಿಕೆ ತೀವ್ರ ಸ್ವರೂಪದಾಗಿರುವ ಕಾರಣ ಐಸಿಸಿ ಕ್ರಮ ಜರುಗಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಐಸಿಸಿ ವರ್ತನೆಗೆ ಸಂಬಂಧಿಸಿದಂತೆ ನಿಯಮಾವಳಿ ೨.೮ರ ಪ್ರಕಾರ ಕೊಹ್ಲಿ ವಿರುದ್ದ ಒಂದು ಪಂದ್ಯ ನಿಷೇಧ ವಿಧಿಸುವ ಸಾಧ್ಯತೆಯಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ.
ಡೀನ್ ಎಲ್ಗರ್ ಡಿ ಆರ್ ಎಸ್ ಕಾಲ್ ನಂತರ ಕೊಹ್ಲಿ ಸ್ಟಂಪ್ ಮೈಕ್ ಸಮೀಪ ತೆರಳಿ ಕೇವಲ ಎದುರಾಳಿ ತಂಡದ ಮೇಲೆ ಮಾತ್ರವಲ್ಲ.. ನಿಮ್ಮ ತಂಡದ ಮೇಲೂ ಗಮನ ಹರಿಸಿ.. ಎಲ್ಲರ ಬಗ್ಗೆ ಫೋಕಸ್ ಇರಲಿ ಎಂದು ಸಂಚಲನದ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ.