
ಕೊಹ್ಲಿ-ಡೇಲ್ ಸ್ಟೇನ್
ಪಾರ್ಲ್/ದಕ್ಷಿಣ ಆಫ್ರಿಕಾ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಮೇಲೆ ಇಡೀ ಜಗತ್ತೇ ಆಘಾತಕ್ಕೊಳಗಾಗಿತ್ತು.
ಬಳಿಕ ಕ್ರೀಡಾ ಪ್ರೇಮಿಗಳು ವಿರಾಟ್ ಕೊಹ್ಲಿ ನಿರ್ಧಾರವನ್ನು ಗೌರವಿಸಿದರು. ಅಲ್ಲದೆ, ತಮ್ಮದೇ ರೀತಿಯಲ್ಲಿ ಶುಭ ಹಾರೈಸಿದರು. ಈ ಮಧ್ಯೆ, ಆಫ್ರಿಕನ್ ಕ್ರಿಕೆಟ್ ತಂಡದ ಮಾಜಿ ಅನುಭವಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಕೂಡ ಕೊಹ್ಲಿ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಹಂ ಬಿಟ್ಟು ವಿರಾಟ್ ಹೊಸ ನಾಯಕನನ್ನು ಬೆಂಬಲಿಸಬೇಕು: ಕಪಿಲ್ ದೇವ್
ನಿನ್ನೆ ಮುಕ್ತಾಯಗೊಂಡ ಮೊದಲ ಒಂದು ದಿನದ ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ನೊಂದಿಗೆ ಮಾತನಾಡಿದ ಮಾಜಿ ಆಫ್ರಿಕನ್ ಆಟಗಾರ ಡೇಲ್ ಸ್ಟೇನ್, “ಜೀವನವನ್ನು ಬಯೋ ಬಬಲ್ ತುಂಬಾ ಕಷ್ಟಕರವನ್ನಾಗಿಸಿದೆ. ಪಂದ್ಯದ ವೇಳೆ, ನಾಯಕನಾಗಿ ಸಾಕಷ್ಟು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಟೂರ್ನಿಗಳನ್ನು ಆಡಬೇಕಾದ್ರೆ, ವಿದೇಶಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಈ ಎಲ್ಲದರ ಮಧ್ಯೆ ಕುಟುಂಬದ ಕಡೆ ಗಮನ ಕೊಡಬೇಕಾಗುತ್ತದೆ. ಈ ಎಲ್ಲ ದೈನಂದಿನ ಚಟುವಟಿಕೆಗಳಿಂದ ಆಯಾಸ ಉಂಟಾಗುತ್ತದೆ.
ಮಾತು ಮುಂದುವರಿಸಿದ ಡೇಲ್ ಸ್ಟೇನ್, ನಾವು ಆಟಗಾರರಾಗಿ ಮೈದಾನದಲ್ಲಿ ಉತ್ತಮ ಆಟವನ್ನು ಪ್ರದರ್ಶನ ಮಾಡಬೇಕಾಗುತ್ತದೆ. ಇದಕ್ಕಾಗಿ ಎಲ್ಲ ಏಕಾಗ್ರತೆಯನ್ನು ಆಟದತ್ತ ಕೇಂದ್ರಿಕರಿಸಬೇಕಾಗುತ್ತದೆ. ಆದರೆ, ಮದುವಯಾದ ಮೇಲೆ ಈ ವಿಷಯಗಳು ಮುಖ್ಯ ಅನಿಸುವುದಿಲ್ಲ. ವಿರಾಟ್ ಯುವ ಕುಟುಂಬ ಹೊಂದಿದ್ದಾರೆ. ಈಗ ಕೊಹ್ಲಿ ನಾಯಕತ್ವವನ್ನು ತೊರೆದಿದ್ದು, ಕುಟುಂಬ ಹಾಗೂ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ” ಎಂದು ಡೇಲ್ ಸ್ಟೇನ್ ಹೇಳಿದರು.
ಇದನ್ನೂ ಓದಿ: ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ: ಒಟ್ಟಾರೆ ಟೀಂ ಇಂಡಿಯಾ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ!
ಐಸಿಸಿ ಟಿ-20 ವಿಶ್ವಕಪ್ನ ಆರಂಭಕ್ಕೂ ಮೊದಲು ಟ್ವೆಂಟಿ ಟ್ವೆಂಟಿ ಟೀಮ್ ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಬಳಿಕ, ಭಾರತೀಯ ಕ್ರಿಕೆಟ್ನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಟಿ 20 ಮತ್ತು ಏಕದಿನ ಮಾದರಿಗಳಿಗೆ ಹೊಸ ನಾಯಕರನ್ನು ನೇಮಿಸುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿತ್ತು. ಬಿಸಿಸಿಐನ ಈ ನಿರ್ಧಾರದಿಂದ ಕೊಹ್ಲಿ ಬೇಸರಗೊಂಡಿದ್ದರು. ಈ ಚರ್ಚೆಗಳ ನಡುವೆಯೇ ದಕ್ಷಿಣ ಆಫ್ರಿಕಾದ ಟೆಸ್ಟ್ ಟೂರ್ನಿಯಲ್ಲಿನ ಸೋಲಿನ ಬಳಿಕ ಕೊಹ್ಲಿ ಟೆಸ್ಟ್ ತಂಡಕ್ಕೂ ರಾಜೀನಾಮೆ ನೀಡಿದರು. ವಿರಾಟ್ ಇದೀಗ ಭಾರತ ತಂಡದ ಹಿರಿಯ ಆಟಗಾರನಾಗಿ ಮೈದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.