ಲಾಹೋರ್ ಬಾಂಬ್ ಸ್ಫೋಟ: 24 ವರ್ಷಗಳ ಬಳಿಕ ಪಾಕ್ ನಲ್ಲಿ ಆಡಲು ಉತ್ಸುಕವಾಗಿದ್ದ ಆಸೀಸ್ ಇದೀಗ ಥಂಡ ಹೊಡೆದಿದೆ!
ಪಾಕಿಸ್ತಾನದ ಲಾಹೋರ್ ನಗರದಲ್ಲಿ ಭಾರೀ ಬಾಂಬ್ ಸ್ಫೋಟಗೊಂಡಿದ್ದು ಗೊತ್ತೇ ಇದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿ, ಕನಿಷ್ಠ 30 ಮಂದಿ ಗಾಯಗೊಂಡಿದ್ದರು. ಇದೀಗ ಪಾಕ್ ಪ್ರವಾಸ ಕೈಗೊಳ್ಳಬೇಕಿರುವ ಆಸ್ಟ್ರೇಲಿಯಾ ಈ ದಾಳಿಯಿಂದ ಯೋಚಿಸುವಂತಾಗಿದೆ.
Published: 22nd January 2022 03:31 PM | Last Updated: 22nd January 2022 03:32 PM | A+A A-

ಆಸ್ಟ್ರೇಲಿಯಾ ಆಟಗಾರರು
ಇಸ್ಲಾಮಾಬಾದ್: ಪಾಕಿಸ್ತಾನದ ಲಾಹೋರ್ ನಗರದಲ್ಲಿ ಭಾರೀ ಬಾಂಬ್ ಸ್ಫೋಟಗೊಂಡಿದ್ದು ಗೊತ್ತೇ ಇದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿ, ಕನಿಷ್ಠ 30 ಮಂದಿ ಗಾಯಗೊಂಡಿದ್ದರು. ಇದೀಗ ಪಾಕ್ ಪ್ರವಾಸ ಕೈಗೊಳ್ಳಬೇಕಿರುವ ಆಸ್ಟ್ರೇಲಿಯಾ ಈ ದಾಳಿಯಿಂದ ಯೋಚಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಆ ದೇಶದ ಕೇಂದ್ರ ಸ ಚಿವ ಶೇಖ್ ರಶೀದ್ ಅಹಮದ್ ಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಜತೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಅಡ್ಡಿಪಡಿಸುವುದೇ ಬಾಂಬ್ ಸ್ಫೋಟದ ಹಿಂದಿನ ಪ್ರಮುಖ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಪಾಕಿಸ್ತಾನ್ ಸೂಪರ್ ಲೀಗ್-2022 ಜನವರಿ 27 ರಂದು ಪ್ರಾರಂಭವಾಗಲಿದೆ.
'ದೇಶದಲ್ಲಿ ಶಾಂತಿ ನೆಲೆಸಿರುವ ಕಾರಣ ಪಾಕಿಸ್ತಾನವನ್ನು ಅಶಾಂತಿಯಿಂದ ಅಸ್ಥಿರಗೊಳಿಸಲು ಕಿಡಿಗೇಡಿಗಳು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್, ಐತಿಹಾಸಿಕ ಆಸ್ಟ್ರೇಲಿಯಾ ಪ್ರವಾಸ ತಡೆಯುವುದು. ಈ ಸ್ಫೋಟದ ಪ್ರಮುಖ ಉದ್ದೇಶವಾಗಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಶೀದ್ ಅಹ್ಮದ್ ಹೇಳಿದ್ದಾರೆ.
ಆಸ್ಟ್ರೇಲಿಯ ತಂಡ 24 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ಭಾಗವಾಗಿ, ಆಸ್ಟ್ರೇಲಿಯಾ ಮಾರ್ಚ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಟೆಸ್ಟ್, ಮೂರು ಏಕದಿನ ಹಾಗೂ ಟಿ20 ಪಂದ್ಯವನ್ನು ಆಡಲಿದೆ. ಆದರೆ, ಸ್ಫೋಟದಿಂದ ಆಸೀಸ್ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ.