3ನೇ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಕ್ಕೆ ಆರಂಭಿಕ ಆಘಾತ; 3 ವಿಕೆಟ್ ಪತನ!
ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದು 26 ಓವರ್ ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 144 ರನ್ ಪೇರಿಸಿದೆ.
Published: 23rd January 2022 04:19 PM | Last Updated: 23rd January 2022 04:19 PM | A+A A-

ಟೀಂ ಇಂಡಿಯಾ
ಕೇಪ್ ಟೌನ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದು 26 ಓವರ್ ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 144 ರನ್ ಪೇರಿಸಿದೆ.
ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಕ್ಕೆ ದೀಪಕ್ ಚಹಾರ್ ಎರಡು ವಿಕೆಟ್ ಪಡೆದು ಶಾಕ್ ನೀಡಿದರು.
ದಕ್ಷಿಣ ಆಫ್ರಿಕಾ ಪರ ಜನ್ನೇಮನ್ ಮಲಾನ್ 1 ರನ್ ಬಾರಿಸಿದ್ದು ಮಾರಕ್ರಾಮ್ 15 ರನ್ ಬಾರಿಸಿ ಔಟಾದರು. ಇನ್ನು ಡಿಕಾಕ್ ಅಜೇಯ 93 ರನ್ ಬಾರಿಸಿದ್ದು ದುಸೇನ್ ಅಜೇಯ 32 ರನ್ ಪೇರಿಸಿ ಆಡುತ್ತಿದ್ದಾರೆ.