ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಾರಥ್ಯ; ದೀಪಕ್ ಹೂಡಾ, ಆವೇಶ್ ಖಾನ್ ಅಚ್ಚರಿ ಆಯ್ಕೆ
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆಯೇ ಫಿಟ್ ಆಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗೆ ತಂಡದ ಸಾರಥ್ಯ ನೀಡಲಾಗಿದೆ.
Published: 27th January 2022 01:36 AM | Last Updated: 27th January 2022 01:30 PM | A+A A-

ಟೀಂ ಇಂಡಿಯಾ
ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆಯೇ ಫಿಟ್ ಆಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗೆ ತಂಡದ ಸಾರಥ್ಯ ನೀಡಲಾಗಿದೆ.
ODI squad: Rohit Sharma (Capt), KL Rahul (vc), Ruturaj Gaikwad, Shikhar, Virat Kohli, Surya Kumar Yadav, Shreyas Iyer, Deepak Hooda, Rishabh Pant (wk), D Chahar, Shardul Thakur, Y Chahal, Kuldeep Yadav, Washington Sundar, Ravi Bishnoi, Mohd. Siraj, Prasidh Krishna, Avesh Khan
— BCCI (@BCCI) January 26, 2022
ಹೌದು..ವಾಸಿ ವೆಸ್ಟ್ ಇಂಡೀಸ್ (West Indies)ತಂಡದ ವಿರುದ್ಧ ನಡೆಯಲಿರುವ ತಲಾ ಮೂರು ಪಂದ್ಯಗಳ ಏಕದಿನ (ODI) ಹಾಗೂ ಟಿ20 (T20) ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸಂಪೂರ್ಣವಾಗಿ ಫಿಟ್ ಆಗಿರುವ ರೋಹಿತ್ ಶರ್ಮಾ (Rohit Sharma) ನಾಯಕನ ಜವಾಬ್ದಾರಿಗೆ ಮರಳಿದ್ದು, ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಅಫ್ರಿಕಾ (South Africa) ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್ (KL Rahul) ಉಪನಾಯಕನ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.
T20I squad: Rohit Sharma(Capt),KL Rahul (vc),Ishan Kishan,Virat Kohli,Shreyas Iyer,Surya Kumar Yadav, Rishabh Pant (wk),Venkatesh Iyer,Deepak Chahar, Shardul Thakur, Ravi Bishnoi,Axar Patel, Yuzvendra Chahal, Washington Sundar, Mohd. Siraj, Bhuvneshwar, Avesh Khan, Harshal Patel
— BCCI (@BCCI) January 26, 2022
18 ಸದಸ್ಯರ ತಂಡದಲ್ಲಿ ನಿರೀಕ್ಷೆಯಂತೆಯೇ ಏಕದಿನ ತಂಡಕ್ಕೆ ದೀಪಕ್ ಹೂಡಾ ಆಯ್ಕೆಯಾಗಿದ್ದರೆ, ಭುವನೇಶ್ವರ್ ಕುಮಾರ್ ಕೇವಲ ಟಿ20 ಸರಣಿಯಲ್ಲಿ ಮಾತ್ರ ಆಡಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಕಳಪೆ ಆಟವಾಡಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ.
Jasprit Bumrah, Mohd. Shami have been rested from the series.
— BCCI (@BCCI) January 26, 2022
KL Rahul will be available from 2nd ODI onwards.
R Jadeja is undergoing his final stage of recovery post his knee injury and will not be available for the ODIs and T20Is.
Axar Patel will be available for the T20Is.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ 18 ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕನಿಷ್ಠ 1 ವಿಕೆಟ್ ಪಡೆಯಲು ಯಶಸ್ವಿಯಾಗಿರಲಿಲ್ಲ. ಜಸ್ ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಮೊಹಮದ್ ಶಮಿ ಹಾಗೂ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಗೆ ಇದೇ ಕಾರಣಕ್ಕೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಹಾಗೂ ಟಿ20 ಎರಡೂ ಸರಣಿಯಲ್ಲಿ ಆಡಲಿದ್ದು, ನಾಯಕತ್ವದ ಕುರಿತಾಗಿ ದೊಡ್ಡ ಮಟ್ಟದ ವಿವಾದಗಳು ನಡೆದ ಬಳಿಕ ಭಾರತೀಯ ಕ್ರಿಕೆಟ್ ನ ಶಕ್ತಿ ಕೇಂದ್ರಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ಒಟ್ಟಾಗಿ ಆಡುತ್ತಿದ್ದಾರೆ.