ಬಿಟ್ಕಾಯಿನ್ ಸ್ಕ್ಯಾಮರ್: ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್
ಇತ್ತೀಚೆಗೆ ಬಿಟ್ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್ ಆಗಿದೆ. ಇದೀಗ ಈ ಪಟ್ಟಿಗೆ ಕೃನಾಲ್ ಸೇರ್ಪಡೆಗೊಂಡಿದ್ದಾರೆ.
Published: 27th January 2022 03:52 PM | Last Updated: 27th January 2022 03:52 PM | A+A A-

ಕೃನಾಲ್ ಪಾಂಡ್ಯ
ಮುಂಬೈ: ಇತ್ತೀಚೆಗೆ ಬಿಟ್ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್ ಆಗಿದೆ. ಇದೀಗ ಈ ಪಟ್ಟಿಗೆ ಕೃನಾಲ್ ಸೇರ್ಪಡೆಗೊಂಡಿದ್ದಾರೆ.
ಹೌದು ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಟ್ವಿಟರ್ ಖಾತೆಯು ಹ್ಯಾಕ್ ಆಗಿದೆ. ಬಿಟ್ ಕಾಯಿನ್ ವಂಚಕರು ಹ್ಯಾಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹ್ಯಾಕ್ ಆದ ಅಕೌಂಟ್ ನಿಂದ ಬೆಳಿಗ್ಗೆ ಸುಮಾರು ೭.೩೦ಕ್ಕೆ ಅನುಸರಿಸಿದ್ದಕ್ಕಾಗಿ ಕೃನಾಲ್ ಅವರಿಗೆ ಧನ್ಯವಾದಗಳು ಎಂಬ ವಾಕ್ಯ ಮರು ಟ್ವೀಟ್ ಆಗಿದೆ.
ಕೃನಾಲ್ ಪಾಂಡ್ಯ ಅವರ ಹ್ಯಾಕ್ ಆದ ಅಕೌಂಟ್ ನಿಂದ ಮಾಡಿದ ಹಲವಾರು ಟ್ವೀಟ್ ಗಳಲ್ಲಿ ಒಂದರಲ್ಲಿ ‘ಬಿಟ್ಕಾಯಿನ್ ಗಳ ಖಾತೆಯನ್ನು’ ಮಾರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಕೃನಾಲ್ ಅವರು ಇಲ್ಲಿಯವರೆಗೆ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಐದು ಏಕದಿನ ಸರಣಿಗಳು ಮತ್ತು 19 ಟಿ20 ಪಂದ್ಯಗಳನ್ನು ಆಡಿದ್ದಾರೆ. 2022ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ದೇಶೀಯ ತಂಡ ಬರೋಡಾ ಪರವಾಗಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಐಪಿಎಲ್ 2022 ರ ಮೆಗಾ ಹರಾಜು ಮುಂದಿನ ತಿಂಗಳು ನಡೆಯಲಿದೆ ಮತ್ತು ಕೃನಾಲ್ ಈಗ ಅದನ್ನು ಎದುರು ನೋಡುತ್ತಿದ್ದಾರೆ ಏಕೆಂದರೆ 10 ತಂಡಗಳು ಇಡೀ ವಿಶ್ವದ ಅಗ್ರ T20 ಆಟಗಾರರಿಗಾಗಿ ಪರಸ್ಪರ ಸೆಣಸಾಡಲಿವೆ.
ಫೆಬ್ರವರಿ 12 ಮತ್ತು 13 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಭಾರತದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ನೋಡಿದರೆ, ಐಪಿಎಲ್ 2022 ಅನ್ನು ಭಾರತದಲ್ಲಿ ಆಡುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ IPL 2021 ರ ಮೊದಲಾರ್ಧವನ್ನು ಭಾರತದಲ್ಲಿ ಆಡಲಾಯಿತು ಮತ್ತು ಉಳಿದವು ಯುಎಇಯಲ್ಲಿ ಪೂರ್ಣಗೊಂಡಿತು.