ಸ್ವಿಮ್ಮಿಂಗ್ ಪೂಲ್ಗೆ ತಳ್ಳಬೇಕಾ: ಆ್ಯಂಕರ್ ಗೆ ಅಖ್ತರ್ ವಾರ್ನಿಂಗ್ ಕೊಟ್ಟಿದ್ದೇಕೆ; ವಿಡಿಯೋ ನೋಡಿ!
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಂದರ್ಶನಕ್ಕೆ ಬಂದಿದ್ದ ಆ್ಯಂಕರ್ ಗೆ ಅಖ್ತರ್ ವಾರ್ನಿಂಗ್ ಕೊಟ್ಟಿದ್ದಾರೆ.
Published: 29th January 2022 07:11 PM | Last Updated: 29th January 2022 07:11 PM | A+A A-

ಅಖ್ತರ್
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಂದರ್ಶನಕ್ಕೆ ಬಂದಿದ್ದ ಆ್ಯಂಕರ್ ಗೆ ಅಖ್ತರ್ ವಾರ್ನಿಂಗ್ ಕೊಟ್ಟಿದ್ದಾರೆ.
ಹುಚ್ಚು ಪ್ರಶ್ನೆಗಳಿಂದಲೇ ಸಮಯವನ್ನೆಲ್ಲಾ ಹಾಳು ಮಾಡಿದ ಆ್ಯಂಕರ್.. ತಕ್ಷಣ ಆಕೆಯನ್ನು ಈಜುಕೊಳಕ್ಕೆ ಎಸೆಯಿರಿ ಎಂದಿದ್ದಾರೆ. ಇದು ನಿಜವಾದ ವಾರ್ನಿಂಗ್ ಎಂದು ನೀವು ಭಾವಿಸಿದರೆ ನೀವು ತಪ್ಪಾಗಿ ತಿಳಿದಿದ್ದೀರಿ ಎಂದರ್ಥ. ಶೋಯೆಬ್ ಅಖ್ತರ್ ಭಾರತೀಯ ದೂರದರ್ಶನ ನಿರೂಪಕಿ ಶಫಾಲಿ ಬಗ್ಗಾ ಅವರೊಂದಿಗೆ ತಮಾಷೆಯ ಸಂದರ್ಶನವನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಕೆ .. ತನ್ನ ತಮಾಷೆಯ ಪ್ರಶ್ನೆಗಳಿಂದ ಅಖ್ತರ್ ನ್ನ ನಗಿಸುವುದಾಗಿ ಸವಾಲು ಹಾಕಿದಳು. ಶಫಾಲಿ ಬಗ್ಗ ಕೇಳಿದ ಒಂದು ಪ್ರಶ್ನೆಗೂ ಅಖ್ತರ್ ನಗಲಿಲ್ಲ. ಆದರೆ, ಕೊನೆಯ ಪ್ರಶ್ನೆಗೆ ಅಖ್ತರ್ ನಕ್ಕೆ ಬಿಟ್ಟರು. ಕೊನೆಗೆ ಈ ಆಂಕರ್ ನೀವು ಸೋತಿದ್ದೀರಿ ಎಂದು ಒಪ್ಪಿಕೊಳ್ಳಿ ಎಂದು ಕೇಳಿದರು. ಇದಕ್ಕೆ ನಕ್ಕ ಅಖ್ತರ್.. ಕಾರ್ಯಕ್ರಮದ ನಿರ್ಮಾಪಕನಿಗೆ ಇವರ ಪ್ರಶ್ನೆಗಳು ಮುಗಿದಿದ್ಯಾ? ಮುಗಿದಿದ್ದರೆ ಈಕೆಯನ್ನ ಈಜುಕೊಳದಲ್ಲಿ ತಳ್ಳಿಬಿಡು ಎಂದು ಹೇಳಿ ತಮಾಷೆ ಮಾಡಿದ್ದಾರೆ. ಈ ವೀಡಿಯೋವನ್ನ ಶಫಾಲಿ ಬಗ್ಗಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.