ಕೃನಾಲ್ ಪಾಂಡ್ಯ-ಪಂಖೂರಿ
ಕೃನಾಲ್ ಪಾಂಡ್ಯ-ಪಂಖೂರಿ

ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್ ಪಾಂಡ್ಯ ಪತ್ನಿ ಪಂಖೂರಿ

ಭಾರತ ಕ್ರಿಕೆಟಿಗ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖೂರಿ ಅವರು ಗಂಡು ಮಗುವಿನ ಪೋಷಕರಾಗಿದ್ದಾರೆ. ಟೀಂ ಇಂಡಿಯ ಮತ್ತು ಲಖನೌ ಸೂಪರ್ ಜೈಂಟ್ಸ್ ಆಲ್‌ರೌಂಡರ್ ಭಾನುವಾರ ತನ್ನ ಮಗನ ಹೆಸರನ್ನು ಪರಿಚಯಿಸಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟಿಗ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖೂರಿ ಅವರು ಗಂಡು ಮಗುವಿನ ಪೋಷಕರಾಗಿದ್ದಾರೆ. ಟೀಂ ಇಂಡಿಯ ಮತ್ತು ಲಖನೌ ಸೂಪರ್ ಜೈಂಟ್ಸ್ ಆಲ್‌ರೌಂಡರ್ ಭಾನುವಾರ ತನ್ನ ಮಗನ ಹೆಸರನ್ನು ಪರಿಚಯಿಸಿದ್ದಾರೆ.  

ಕೃನಾಲ್ ಅವರು ಮಾಡೆಲ್ ಆಗಿರುವ ಪಂಖೂರಿ ಶರ್ಮಾ ಅವರನ್ನು 2017ರಲ್ಲಿ ವಿವಾಹವಾದರು. ಕೃನಾಲ್ ಅವರು ಸಹೋದರ ಹಾರ್ದಿಕ್ ಪಾಂಡ್ಯರಂತೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಕೃನಾಲ್ ಮತ್ತು ಪಂಖೂರಿ ತಮ್ಮ ಮಗನಿಗೆ 'ಕವಿರ್' ಎಂದು ಹೆಸರಿಟ್ಟಿದ್ದಾರೆ.

ಕವಿ ಕೃನಾಲ್ ಪಾಂಡ್ಯ ಎಂದು ಕ್ರುನಾಲ್ ಟ್ವಿಟರ್‌ನಲ್ಲಿ ಮಗನ ಫೋಟೋ ಪೋಸ್ಟ್ ಮಾಡಿದ್ದಾರೆ.

ಇದುವರೆಗೆ ಭಾರತ ತಂಡದ ಪರ 19 ಟಿ20 ಹಾಗೂ ಐದು ಏಕದಿನ ಪಂದ್ಯಗಳಲ್ಲಿ ಕೃನಾಲ್ ಆಡಿದ್ದಾರೆ. ಇತ್ತೀಚೆಗೆ ಕ್ರುನಾಲ್ ಅವರು ಆಗಸ್ಟ್ 2-23 ರವರೆಗೆ ನಡೆಯುವ ರಾಯಲ್ ಲಂಡನ್ ಕಪ್ ಏಕದಿನ ಚಾಂಪಿಯನ್‌ಶಿಪ್‌ಗಾಗಿ ಇಂಗ್ಲಿಷ್ ಕೌಂಟಿ ವಾರ್ವಿಕ್‌ಷೈರ್‌ಗೆ ಸಹಿ ಹಾಕಿದರು.

ಕೃನಾಲ್ ಅವರು 2021 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ODI ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ODI ಕ್ರಿಕೆಟ್‌ನಲ್ಲಿ ಚೊಚ್ಚಲ ಆಟಗಾರನಾಗಿ 26 ಎಸೆತಗಳಲ್ಲಿ ವೇಗದ ಅರ್ಧಶತಕವನ್ನು ಹೊಡೆದರು.

ಮುಂಬೈ ಇಂಡಿಯನ್ಸ್ ನೊಂದಿಗೆ ಅನೇಕ ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ಕ್ರುನಾಲ್, ಕಳೆದ ಆವೃತ್ತಿಯಲ್ಲಿ LSG ಗಾಗಿ ಆಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com