ವಿಂಡೀಸ್ ವಿರುದ್ಧ ಸರಣಿ ಜಯ: ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಭಾರತ

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವನ್ನೂ ಗೆದ್ದು 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ತಂಡವೊಂದರ ವಿರುದ್ಧ ಅತೀ ಹೆಚ್ಚು ಸತತ ಸರಣಿ ಜಯ ಗಳಿಸಿದ ಮೊದಲ ತಂಡ ಎಂಬ  ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಭಾರತಕ್ಕೆ ಜಯ
ಭಾರತಕ್ಕೆ ಜಯ

ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವನ್ನೂ ಗೆದ್ದು 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ತಂಡವೊಂದರ ವಿರುದ್ಧ ಅತೀ ಹೆಚ್ಚು ಸತತ ಸರಣಿ ಜಯ ಗಳಿಸಿದ ಮೊದಲ ತಂಡ ಎಂಬ  ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇಂದಿನ ಸರಣಿ ಜಯದ ಮೂಲಕ ಭಾರತದ ಖಾತೆಗೆ ವಿಂಡೀಸ್ ವಿರುದ್ಧ ಮತ್ತೊಂದು ಸರಣಿ ಜಯ ದಾಖಲಾಗಿದ್ದು, ಇದು ಭಾರತಕ್ಕೆ ವಿಂಡೀಸ್ ವಿರುದ್ಧ 12ನೇ ಸತತ ಸರಣಿ ಜಯವಾಗಿದೆ. ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ವಿರುದ್ಧ ಮತ್ತೊಂದು ತಂಡ ಸತತವಾಗಿ ಹೆಚ್ಚು  ಸರಣಿ ಗೆದ್ದ ಪಟ್ಟಿಯಲ್ಲಿ ಭಾರತ ಇದೀಗ ಅಗ್ರ ಸ್ಥಾನಕ್ಕೇರಿದೆ.

ವಿಂಡೀಸ್ ವಿರುದ್ಧದ ಭಾರತ ಸತತ ಜೈತ್ರಯಾತ್ರೆ 2007ರಲ್ಲಿ ಪ್ರಾರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಅಜೇಯವಾಗಿ ಮುಂದುವರೆದಿದೆ. 

ಈ ಹಿಂದೆ ಈ ಸ್ಥಾನದಲ್ಲಿ ಪಾಕಿಸ್ತಾನವಿತ್ತು. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸತತ 11 ಸರಣಿಗಳಲ್ಲಿ ಜಯಗಳಿಸಿದೆ. 1996ರಿಂದ 2021ರವರೆಗೆ ಪಾಕ್ ಜಿಂಬಾಬ್ವೆ ವಿರುದ್ದ 11 ಸರಣಿಗಳನ್ನು ಗೆದ್ದು ಈ ಸಾಧನೆ ಮಾಡಿತ್ತು. ಇದೀಗ ಭಾರತ ತನ್ನ 12ನೇ ಸರಣಿ ಜಯದ ಮೂಲಕ ಈ ದಾಖಲೆಯನ್ನು  ಹಿಂದಿಕ್ಕೆ ಅಗ್ರಸ್ಥಾನಕ್ಕೇರಿದೆ.

ವಿಂಡೀಸ್ ವಿರುದ್ಧ ಸತತ 2 ಕ್ಲೀನ್ ಸ್ವೀಪ್
ಇನ್ನು ಇಂದಿನ ಜಯದೊಂದಿಗೆ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸತತ 2 ಏಕದಿನ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ. ಈ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ತಂಡ ಆಗಲೂ 3-0 ಅಂತರದಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿತ್ತು. ಇದೀಗ  ತವರಿನಲ್ಲಿಯೇ ಭಾರತದ ಎದುರು ಮತ್ತೆ ವೈಟ್ ವಾಶ್ ಮುಖಭಂಗಕ್ಕೀಡಾಗಿದೆ.

Most consecutive bilateral ODI series wins against a team
12 Ind vs WI (2007-22) *
11 Pak vs Zim (1996-21)
10 Pak vs WI (1999-22)
9 SA vs Zim (1995-18)
9 Ind vs SL (2007-21)

India (3 Match) v West Indies 2021/22
India (3 Match) v West Indies 2022

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com