ಕಾಮನ್ ವೆಲ್ತ್ ಗೇಮ್ಸ್ 2022: ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಪಂದ್ಯ, ಟಾಸ್ ಗೆದ್ದ ಭಾರತ ಮೊದಲಿಗೆ ಬ್ಯಾಟಿಂಗ್ ಆಯ್ಕೆ 

ಕಾಮನ್ ವೆಲ್ತ್ ಗೇಮ್ಸ್ 2022 ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಟಾಸ್ ಸಂದರ್ಭದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕಿಯರ ಚಿತ್ರ
ಟಾಸ್ ಸಂದರ್ಭದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕಿಯರ ಚಿತ್ರ

ಬರ್ಮಿಂಗ್ ಹ್ಯಾಮ್:  ಕಾಮನ್ ವೆಲ್ತ್ ಗೇಮ್ಸ್ 2022 ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

 ಕಾಮನ್ ವೆಲ್ತ್ ನಲ್ಲಿ ಇದೇ ಮೊದಲ ಬಾರಿಗೆ, ಒಟ್ಟಾರೇಯಾಗಿ ಬಹು ಕ್ರೀಡಾಕೂಟದಲ್ಲಿ ಎರಡನೇ ಬಾರಿಗೆ ಮಹಿಳೆಯರ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಈ ಹಿಂದೆ 1998ರಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು.

ಟಾಸ್ ಸಂದರ್ಭದಲ್ಲಿ ಮಾತನಾಡಿದ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್, ಕಳೆದ ಕೆಲವು ತಿಂಗಳಲ್ಲಿ ನಾವು ತುಂಬಾ ಕಠಿಣ ತರಬೇತಿ ಪಡೆದಿದ್ದೇವೆ. ನಮ್ಮ ಕಡೆಯಿಂದ ಸಕಾರಾತ್ಮಕ ಫಲಿತಾಂಶ ಎದುರು ನೋಡುತ್ತಿದ್ದೇವೆ. ತಂಡದಲ್ಲಿ ಮೂವರು ಸ್ಪೀನ್ನರ್ ಗಳು, ಇಬ್ಬರು ಮಧ್ಯಮ ವೇಗಿಗಳು, ಕೀಪರ್ ಗಳಿದ್ದಾರೆ. ಉಳಿದವರು ಬ್ಯಾಟರ್ ಗಳಾಗಿದ್ದಾರೆ ಎಂದರು. ಉತ್ತಮ ರೀತಿಯಲ್ಲಿ ಸಜ್ಜಾಗಿದ್ದು, ಕ್ರಿಕೆಟ್ ಆಡಲು ನಾವು ಸಿದ್ದವಾಗಿದ್ದೇವೆ ಎಂದು ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನ್ನಿಂಗ್ ಹೇಳಿದರು. 

ಭಾರತ ತಂಡ ಇಂತಿದೆ: ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನಾ, ಶಫಾಲಿ ವರ್ಮಾ, ಯಾಸ್ಟಿಕಾ ಭಾಟಿಯಾ, ರೊಡ್ರಿಗೆಸ್, ಹರ್ಲಿನ್ ಡಿಯೋಲ್, ದೀಫ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್ , ಮೇಘನಾ ಸಿಂಗ್, ರೇಣುಕಾ ಠೂಕಾರ್

ಆಸ್ಟ್ರೇಲಿಯಾ ತಂಡ ಇಂತಿದೆ: ಆಲಿಸ್ಯಾ ಹೆಲಿ, ಬೆತ್ ಮೂನಿ, ಮೆಗ್ ಲ್ಯಾನ್ನಿಂಗ್, ತೆಹಲಿಯಾ ಮ್ಯಾಕ್ ಗ್ರತ್, ರಾಚೆಲ್  ಹೇನ್ಸ್, ಗಾರ್ಡ್ ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸ್ಸೇನ್, ಅಲಾನಾ ಕಂಗ್, ಮೆಗನ್ ಸ್ಕಾಟ್, ಡಿ ಬ್ರೌನ್.  ಜುಲೈ 28 ರಿಂದ ಆರಂಭವಾಗಿರುವ ಕಾಮನ್ ವೆಲ್ತ್ ಕ್ರೀಡಾಕೂಟ ಆಗಸ್ಟ್ 8 ರಂದು ಮುಕ್ತಾಯವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com