ಔಟ್ ಆಫ್ ಫಾರ್ಮ್: ಬಾಂಗ್ಲಾ ಟೆಸ್ಟ್ ಕ್ಯಾಪ್ಟನ್ ರಾಜೀನಾಮೆ, ಶಕೀಬ್ ಅಲ್ ಹಸನ್ ನೂತನ ನಾಯಕ
ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಭಾರಿ ಬದಲಾವಣೆ ನಡೆದಿದೆ. ಕಳಪೆ ಫಾರ್ಮ್ ಹಾಗೂ ಶ್ರೀಲಂಕಾ ವಿರುದ್ಧದ ಸೋಲಿನ ಬಳಿಕ ಮೊಮಿನುಲ್ ಹಕ್ ರಾಜೀನಾಮೆ ನೀಡಿದ್ದು, ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಟೆಸ್ಟ್ ತಂಡದ
Published: 02nd June 2022 07:57 PM | Last Updated: 02nd June 2022 07:57 PM | A+A A-

ಶಕೀಬ್ ಅಲ್ ಹಸನ್
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಭಾರಿ ಬದಲಾವಣೆ ನಡೆದಿದೆ. ಕಳಪೆ ಫಾರ್ಮ್ ಹಾಗೂ ಶ್ರೀಲಂಕಾ ವಿರುದ್ಧದ ಸೋಲಿನ ಬಳಿಕ ಮೊಮಿನುಲ್ ಹಕ್ ರಾಜೀನಾಮೆ ನೀಡಿದ್ದು, ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಟೆಸ್ಟ್ ತಂಡದ ನೂತನ ನಾಯಕರನ್ನಾಗಿ ನೇಮಿಸಲಾಗಿದೆ. ಕ್ರಿಕ್ಬಜ್ ಪ್ರಕಾರ, ಲಿಟನ್ ದಾಸ್ ಅವರಿಗೆ ಬಾಂಗ್ಲಾದೇಶ ಟೆಸ್ಟ್ ತಂಡದ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ 6 ಟೆಸ್ಟ್ ಪಂದ್ಯಗಳಲ್ಲಿ ಮೊಮಿನುಲ್ ಹಕ್ ಗಳಿಸಿದ್ದು ಕೇವಲ 162 ರನ್. ಶ್ರೀಲಂಕಾ ವಿರುದ್ಧ ಮೇ ನಲ್ಲಿ ನಡೆದ 2 ಟೆಸ್ಟ್ ಪಂದ್ಯಗಳಲ್ಲಿ 1-0 ಅಂತರದಿಂದ ಬಾಂಗ್ಲಾ ತಂಡ ಸೋಲು ಕಂಡಿತ್ತು. ಈ ಟೆಸ್ಟ್ ಸರಣಿಯ 3 ಇನ್ನಿಂಗ್ಸ್ ನಲ್ಲಿ ಹಕ್ ಗಳಿಸಿದ್ದು ಕೇವಲ 11 ರನ್. ಈ ಕಳಪೆ ಫಾರ್ಮ್ ನಿಂದ ಬೇಸತ್ತ ಮೊಮಿನುಲ್ ಹಕ್, ನಾಯಕತ್ವದ ಜವಾಬ್ದಾರಿಯನ್ನು ಬೇರೆಯವರಿಗೆ ಕೊಡಿ. ಇದರಿಂದ ತಂಡಕ್ಕೂ ಉತ್ತಮ ಹಾಗೂ ತನ್ನ ಬ್ಯಾಟಿಂಗ್ ನತ್ತ ಗಮನ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಇದನ್ನು ಓದಿ: ಭಾರತ vs ದಕ್ಷಿಣ ಆಫ್ರಿಕಾ: ಮತ್ತೊಂದು ವಿಶ್ವ ದಾಖಲೆ ಹೊಸ್ತಿಲಲ್ಲಿ ಟೀಂ ಇಂಡಿಯಾ!
2019 ರಲ್ಲಿ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮಾಜಿ ನಾಯಕ ಶಕೀಬ್ ಅವರನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು, ಇದರ ಪರಿಣಾಮವಾಗಿ ಮೊಮಿನುಲ್ ಗೆ ನಾಯಕರಾಗುವ ಅವಕಾಶ ದೊರೆತಿತ್ತು.
ಮೊಮಿನಲ್ ಅವರ ನಾಯಕತ್ವದಡಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಬಾಂಗ್ಲಾ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ಅದರಲ್ಲಿ ನ್ಯೂಜಿಲೆಂಡ್ ವಿರುದ್ಧದ ಐತಿಹಾಸಿಕ ಗೆಲುವು ಸೇರಿದೆ. ಇದಲ್ಲದೆ, ಬಾಂಗ್ಲಾದೇಶವು ಅವರ ನಾಯಕತ್ವದಲ್ಲಿ 17 ಟೆಸ್ಟ್ಗಳಲ್ಲಿ 12 ರಲ್ಲಿ ಸೋಲು ಕಂಡಿದೆ.
ಇದೇ ತಿಂಗಳು ಬಾಂಗ್ಲಾದೇಶ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಕೆರಿಬಿಯನ್ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.