ಅಂತರಾಷ್ಟ್ರೀಯ ಕ್ರಿಕೆಟ್ಗೆ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಗುಡ್ ಬೈ!
ಇಂಗ್ಲೆಂಡ್ನ ಕ್ರಿಕೆಟ್(ODI-T20) ತಂಡದ ನಾಯಕ ಇಯಾನ್ ಮೋರ್ಗಾನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಮೋರ್ಗನ್, ಟೀಂ ಇಂಡಿಯಾ ವಿರುದ್ಧದ ಸರಣಿಗೂ ಮುನ್ನವೇ...
Published: 28th June 2022 08:19 PM | Last Updated: 29th June 2022 03:10 PM | A+A A-

ಇಯಾನ್ ಮೋರ್ಗಾನ್
ಲಂಡನ್: ಇಂಗ್ಲೆಂಡ್ನ ಕ್ರಿಕೆಟ್(ODI-T20) ತಂಡದ ನಾಯಕ ಇಯಾನ್ ಮೋರ್ಗಾನ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಮೋರ್ಗನ್, ಟೀಂ ಇಂಡಿಯಾ ವಿರುದ್ಧದ ಸರಣಿಗೂ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದು 16 ವರ್ಷದ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಭಾರತ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಒಂದು ಟೆಸ್ಟ್, ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಸೀಮಿತ ಓವರ್ಗಳ (ODI-T20) ಸರಣಿಯು ಜುಲೈ 7 ರಿಂದ ಪ್ರಾರಂಭವಾಗಲಿದೆ.
ಇದನ್ನು ಓದಿ: ವಿರಾಟ್ ಗೆ ಪ್ರಪೋಸ್ ಮಾಡಿದ್ದ ಇಂಗ್ಲೆಂಡ್ ಆಟಗಾರ್ತಿ ಜೊತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್!
ಇತ್ತೀಚೆಗೆ ಮೋರ್ಗನ್ ನಿವೃತ್ತಿ ಘೋಷಿಸಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಆದರೆ ಅದು ಇಂದು ನಿಜವೂ ಆಗಿದೆ. ಮೋರ್ಗಾನ್ ಇಂಗ್ಲೆಂಡ್ನ ಅತ್ಯಂತ ಯಶಸ್ವಿ ಏಕದಿನ ನಾಯಕರಾಗಿದ್ದರು. ಅವರು ತಮ್ಮ ನಾಯಕತ್ವದಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಏಕದಿನ ವಿಶ್ವಕಪ್(2019) ಪ್ರಶಸ್ತಿಯನ್ನು ಗೆದ್ದುಕೊಳ್ಳಲು ಸಾಧ್ಯವಾಗಿತ್ತು. ಮೋರ್ಗಾನ್ 126 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಇದರಲ್ಲಿ ತಂಡವು 76 ಬಾರಿ ಗೆಲುವು ಸಾಧಿಸಿದೆ.
ಮೋರ್ಗಾನ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 248 ಒಡಿಐಗಳನ್ನು ಆಡಿದ್ದಾರೆ. 14 ಶತಕಗಳೊಂದಿಗೆ 7701 ರನ್ ಗಳಿಸಿದ್ದಾರೆ. ಟೆಸ್ಟ್ ವಿಭಾಗದಲ್ಲಿ ಮೋರ್ಗಾನ್ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಅವರು 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 2 ಶತಕಗಳೊಂದಿಗೆ 700 ರನ್ ಗಳಿಸಿದ್ದಾರೆ.