ಶೇನ್ ವಾರ್ನ್ ನಿಧನ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನ ಗ್ರೇಟ್ ಸದರ್ನ್ ಸ್ಟ್ಯಾಂಡ್ ಗೆ ಎಸ್‌ಕೆ ವಾರ್ನ್ ಹೆಸರು!
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿರುವ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ವಿಕ್ಟೋರಿಯನ್ ಕ್ರೀಡಾ ಸಚಿವ ಮಾರ್ಟಿನ್ ಪಕುಲಾ ಘೋಷಿಸಿದರು.
Published: 05th March 2022 12:20 PM | Last Updated: 05th March 2022 12:24 PM | A+A A-

ಶೇನ್ ವಾರ್ನ್
ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿರುವ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುವುದು ಎಂದು ವಿಕ್ಟೋರಿಯನ್ ಕ್ರೀಡಾ ಸಚಿವ ಮಾರ್ಟಿನ್ ಪಕುಲಾ ಘೋಷಿಸಿದರು.
52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಕ್ರಿಕೆಟ್ ದಂತಕಥೆ ಸ್ಪಿನ್ನರ್ ಶೇನ್ ವಾರ್ನ್ ರಿಂದ ಇಡೀ ಕ್ರಿಕೆಟ್ ಪ್ರಪಂಚದ ಜೊತೆಗೆ ಆಸ್ಟ್ರೇಲಿಯನ್ ಕ್ರಿಕೆಟ್ ಆಘಾತಕ್ಕೊಳಗಾಗಿದೆ
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ 700ನೇ ವಿಕೆಟ್ ಪಡೆದ ನೆನಪಿಗಾಗಿ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್ ಆಗಿ ಮರು ನಾಮಕರಣ ಮಾಡಲಾಗುತ್ತಿದೆ. ಇವರ ಆಟದ ವೈಖರಿಗೆ ಸಂದ ಗೌರವ ಎಂದು ಡೇನಿಯಲ್ ಆಂಡ್ರ್ಯೂಸ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವಾರ್ನ್ ನಿಧನ: ಗೌರವಾರ್ಥ ಕಪ್ಪು ಪಟ್ಟಿ ಧರಿಸಿ, ಒಂದು ನಿಮಿಷ ಮೌನಾಚರಿಸಿದ ಭಾರತ-ಶ್ರೀಲಂಕಾ ಆಟಗಾರರು!
ವಾರ್ನ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಕ್ರಿಕೆಟಿಗರಲ್ಲಿ ಒಬ್ಬರು. ಅವರು 1990ರ ದಶಕದ ಆರಂಭದಲ್ಲಿ ಅಂತರಾಷ್ಟ್ರೀಯ ರಂಗದಲ್ಲಿ ಲೆಗ್-ಸ್ಪಿನ್ ಕಲೆಯನ್ನು ಬಹುತೇಕ ರೂಢಿಸಿಕೊಂಡ ಏಕೈಕ ಕ್ರಿಕೆಟಿಗ ಮತ್ತು 2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಹೊತ್ತಿಗೆ, ಅವರು 700 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು.
1999ರಲ್ಲಿ ಆಸ್ಟ್ರೇಲಿಯಾದ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಸೆಮಿ-ಫೈನಲ್ ಮತ್ತು ಫೈನಲ್ ಎರಡರಲ್ಲೂ ಪಂದ್ಯದ ಆಟಗಾರನಾಗಿದ್ದಾಗ, ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್ ಶೇನ್ ಅವರ ಸಾಧನೆಗಳನ್ನು ಗುರುತಿಸಿ ಇಪ್ಪತ್ತನೇ ಶತಮಾನದ ಐದು ಕ್ರಿಕೆಟಿಗರಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಎಂದು ಹೆಸರಿಸಿದರು.
ಶೇನ್ ತನ್ನ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳುವ ಹೊತ್ತಿಗೆ 708 ಟೆಸ್ಟ್ ವಿಕೆಟ್ ಮತ್ತು 293 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು. ಸಾರ್ವಕಾಲಿಕ ಅಂತರಾಷ್ಟ್ರೀಯ ವಿಕೆಟ್-ಟೇಕರ್ ಗಳ ಪಟ್ಟಿಯಲ್ಲಿ ಅವರ ಶ್ರೇಷ್ಠ ಸ್ನೇಹಿತ ಮತ್ತು ಪ್ರತಿಸ್ಪರ್ಧಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (1,347) ನಂತರ ಎರಡನೇ ಸ್ಥಾನ ಪಡೆದರು. ಶೇನ್ 11 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯದ ನಾಯಕತ್ವವನ್ನು ವಹಿಸಿದ್ದರು, 10 ಪಂದ್ಯಗಳನ್ನು ಗೆದ್ದಿದ್ದ ಅವರು ಕೇವಲ ಒಮ್ಮೆ ಸೋತರು.