ರಣಜಿ ಟ್ರೋಫಿ: ಪುದುಚೇರಿ ವಿರುದ್ಧ ಅರ್ಭಟಿಸಿದ ಕರ್ನಾಟಕಕ್ಕೆ ಇನ್ನಿಂಗ್ಸ್ ಹಾಗೂ 20 ರನ್ ಗೆಲುವು
ಇಲ್ಲಿನ ಎಸ್ ಎನ್ ಎನ್ ಕಾಲೇಜ್ ಮೈದಾನದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಪುದುಚೇರಿ ವಿರುದ್ಧ ಇನಿಂಗ್ಸ್ ಹಾಗೂ 20 ರನ್ ಅಂತರದ ಜಯಭೇರಿ ಬಾರಿಸಿದೆ.
Published: 06th March 2022 01:38 PM | Last Updated: 06th March 2022 01:38 PM | A+A A-

ಮನೀಷ್ ಪಾಂಡೆ
ಚೆನ್ನೈ: ಇಲ್ಲಿನ ಎಸ್ ಎನ್ ಎನ್ ಕಾಲೇಜ್ ಮೈದಾನದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಪುದುಚೇರಿ ವಿರುದ್ಧ ಇನಿಂಗ್ಸ್ ಹಾಗೂ 20 ರನ್ ಅಂತರದ ಜಯಭೇರಿ ಬಾರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ತ ಪಡಿಕ್ಕಲ್ 178 ಮನೀಷ್ ಪಾಂಡೆ 107 ರನ್ ಸಿಡಿಸಿದರೆ, ಕೆ. ಸಿದ್ದಾರ್ಥ್ 85 ರನ್ ಗಳಿಸಿದರು. ಇದರೊಂದಿಗೆ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 455 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ 241 ರನ್ ಗಳಿಗೆ ಕಟ್ಟಿಹಾಕಿದ ಕರ್ನಾಟಕದ ತಂಡ, 212 ರನ್ ಮುನ್ನಡೆ ಸಾಧಿಸಿ,ಪುದುಚೇರಿಗೆ ಫಾಲೋನ್ ಆನ್ ಹೇರಿತು.
ಕರ್ನಾಟಕ ನೀಡಿದ ಗುರಿ ಬೆನ್ನಟ್ಟಿದ್ದ ಪುದುಚೇರಿ ತಂಡ ಎರಡನೇ ಇನಿಂಗ್ಸ್ ನಲ್ಲಿ ಕೇವಲ 194 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಶ್ರೇಯಸ್ ಗೋಪಾಲ್ ಐದು ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ 3 ಹಾಗೂ ವಿಧ್ಯಾದರ್ ಪಾಟೀಲ ಮತ್ತು ಕೆ. ಗೌತಮ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ದೇವದತ್ತ ಪಡಿಕ್ಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.