ಬೆಂಗಳೂರಿನಲ್ಲಿ ಭಾರತ-ಶ್ರೀಲಂಕಾ ನಡುವೆ ಡೇ-ನೈಟ್ ಟೆಸ್ಟ್; ಎಲ್ಲಾ ಟಿಕೆಟ್ ಸೋಲ್ಡ್ ಔಟ್!
ಬರುವ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು-ರಾತ್ರಿ ಟೆಸ್ಟ್ನ ಮೊದಲ ಎರಡು ದಿನಗಳಿಗೆ ಸಾರ್ವಜನಿಕರಿಗೆ ಲಭ್ಯವಿರುವ ಎಲ್ಲಾ ಟಿಕೆಟ್ಗಳು ಭಾನುವಾರ ಮಾರಾಟವಾಗಿವೆ.
Published: 07th March 2022 12:03 PM | Last Updated: 07th March 2022 02:40 PM | A+A A-

ಟಿಕೆಟ್ ಪಡೆದ ಕ್ರಿಕೆಟ್ ಪ್ರೇಮಿಗಳು
ಬೆಂಗಳೂರು: ಬರುವ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು-ರಾತ್ರಿ ಟೆಸ್ಟ್ನ ಮೊದಲ ಎರಡು ದಿನಗಳಿಗೆ ಸಾರ್ವಜನಿಕರಿಗೆ ಲಭ್ಯವಿರುವ ಎಲ್ಲಾ ಟಿಕೆಟ್ಗಳು ಭಾನುವಾರ ಮಾರಾಟವಾಗಿವೆ.
ಎರಡು ವರ್ಷ ಕೊರೋನಾ ಸಾಂಕ್ರಾಮಿಕದ ವಿರಾಮದ ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಭಾರತ- ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಕ್ರಿಕೆಟ್ ಪ್ರೇಮಿಗಳು ಭಾನುವಾರ ಸುಡುವ ಬಿಸಿಲನ್ನು ಲೆಕ್ಕಿಸದೆ ಉದ್ದದ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದರು.
ಇದನ್ನೂ ಓದಿ: ಭಾರತ- ಲಂಕಾ ಟೆಸ್ಟ್: ಟಿಕೆಟ್ ಗಾಗಿ ಸರದಿ ಸಾಲಿನಲ್ಲಿ ನಿಂತು ಕುಸಿದು ಬಿದ್ದ ವೃದ್ಧ, ಮಾನವೀಯತೆ ಮೆರೆದ ಪೊಲೀಸರು!
ಆನ್ಲೈನ್ (ಮಾರ್ಚ್ 1 ರಿಂದ) ಮತ್ತು ಆಫ್ಲೈನ್ (ಮಾರ್ಚ್ 6) ಎರಡರಲ್ಲೂ ಟಿಕೆಟ್ಗಳು ಕೆಲವೇ ಸಮಯದಲ್ಲಿ ಮಾರಾಟವಾಗಿವೆ. ಕೋವಿಡ್ ಮುನ್ನೆಚ್ಚರಿಕೆಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಸನ ಸಾಮರ್ಥ್ಯವನ್ನು ಶೇ.50ಕ್ಕೆ ಸೀಮಿತಗೊಳಿಸಿದ್ದರಿಂದ ಕೆಲವು ಅಭಿಮಾನಿಗಳಿಗೆ ಟಿಕೆಟ್ ಸಿಗಲಿಲ್ಲ.
ಸುಮಾರು 10,000 ಟಿಕೆಟ್ಗಳು ಸಾರ್ವಜನಿಕರಿಗೆ ಲಭ್ಯವಿದ್ದು, ಉಳಿದವುಗಳನ್ನು ಮಾಜಿ ಆಟಗಾರರು, ಕ್ಲಬ್ ಸದಸ್ಯರು ಇತ್ಯಾದಿಗಳಿಗಾಗಿ ಕಾಯ್ದಿರಿಸಲಾಗಿದೆ. ಅಲ್ಲದೆ, ಇತ್ತೀಚೆಗೆ ಸ್ಟೇಡಿಯಂನಲ್ಲಿ ನವೀಕರಿಸಿದ ಫ್ಲಡ್ಲೈಟ್ ಸೌಲಭ್ಯವನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆಯೊಂದಿಗೆ ಗಾರ್ಡನ್ ಸಿಟಿಗೆ ಬರುತ್ತಿದೆ.