12ನೇ ಆಟಗಾರನಿಗೆ ಜೆರ್ಸಿ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ, ಯಾರು ಆ ವ್ಯಕ್ತಿ?

ಟೀಂ ಇಂಡಿಯಾದ ಅನಧಿಕೃತ 12ನೇ ಆಟಗಾರನಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ, ಆ ಅನಧಿಕೃತ 12ನೇ ಆಟಗಾರ ಯಾರು ಗೊತ್ತಾ ?

Published: 07th March 2022 11:28 AM  |   Last Updated: 07th March 2022 02:16 PM   |  A+A-


Virat Kohli gifts India’s unofficial 12th man

ದರಂ ವೀರ್ ಪಾಲ್ ಗೆ ಕೊಹ್ಲಿ ಜೆರ್ಸಿ

Online Desk

ಮೊಹಾಲಿ: ಟೀಂ ಇಂಡಿಯಾದ ಅನಧಿಕೃತ 12ನೇ ಆಟಗಾರನಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ, ಆ ಅನಧಿಕೃತ 12ನೇ ಆಟಗಾರ ಯಾರು ಗೊತ್ತಾ ?

ಯಾರು ಈ ಧರಂವೀರ್ ಪಾಲ್? 

ಮಧ್ಯಪ್ರದೇಶದ ಧರ್ಮವೀರ್ ಪಾಲ್ ಹುಟ್ಟುವಾಗಲೇ ಪೋಲಿಯೊಗೆ ತುತ್ತಾಗಿದ್ದರು. ಕ್ರಿಕೆಟ್ ಅನ್ನು ಇಷ್ಟಪಡುವ ಧರಂವೀರ್ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಬರುತ್ತಾರೆ. 

ಅಂಗವಿಕಲತೆ ತನ್ನ ನೆಚ್ಚಿನ ಕ್ರಿಕೆಟ್ ಆಡಲು ಯಾವತ್ತೂ ಅಡ್ಡಿ ಮಾಡಿಲ್ಲ.ಅದಕ್ಕಾಗಿಯೇ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಹೋಗುತ್ತೇನೆ ಎಂದು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಹಲವು ಆಟಗಾರರಿಗೆ ಧರಂವೀರ್ ಪಾಲ್ ಅಭಿಮಾನಿಯಾದರು. ಆ ಪಟ್ಟಿಯಲ್ಲಿ ಕೊಹ್ಲಿ ಕೂಡ ಇದ್ದಾರೆ. ಇದರೊಂದಿಗೆ ಧರಂವೀರ್ ಟೀಂ ಇಂಡಿಯಾದ 12ನೇ ಅನಧಿಕೃತ ಆಟಗಾರ ಎಂದು ಕರೆಯಲ್ಪಟ್ಟಿದ್ದಾರೆ.

ಇದನ್ನೂ ಓದಿ: ಕೊಹ್ಲಿ 100ನೇ ಟೆಸ್ಟ್ ಪಂದ್ಯ: ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೌರವರಕ್ಷೆ, ವಿಡಿಯೋ!

ಮೊಹಾಲಿಯಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ಬಸ್ ಹತ್ತಲು ಸಿದ್ಧತೆ ನಡೆಸಿತ್ತು. ಅದೇ ಸಮಯಕ್ಕೆ ಧರಂವೀರ್ ಪಾಲ್ ಬಸ್ಸಿನ ಹತ್ತಿರ ಬಂದರು. ಇದನ್ನು ಗಮನಿಸಿದ ಕೊಹ್ಲಿ ಬಸ್‌ನಿಂದ ಕೆಳಗಿಳಿದು ಅವರ ಬಳಿಗೆ ಬಂದು ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಕೂಡ ಧರಂವೀರ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ತುಂಬಾ ಧನ್ಯವಾದಗಳು ಚಾಂಪಿಯನ್. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ. ನಿಮ್ಮ ಆಟ ಇನ್ನೂ ಕೆಲವು ವರ್ಷಗಳ ಕಾಲ ಮುಂದುವರಿಯಲು ದೇವರು ಆಶೀರ್ವದಿಸಲಿ” ಎಂದು ಸಂದೇಶವನ್ನ ಕೊಹ್ಲಿಗೆ ತಿಳಿಸಿದ್ದಾರೆ.

ಅವರು ಸಚಿನ್, ಎಂಎಸ್ ಧೋನಿ, ಯುವರಾಜ್ ಸಿಂಗ್, ಸೆಹ್ವಾಗ್ ಮತ್ತು ಕೊಹ್ಲಿಯಂತಹ ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸದ್ಯ ಮಧ್ಯಪ್ರದೇಶ ಧರ್ಮವೀರ್ ಪಾಲ್ ಅವರು ವಿಕಲಚೇತನರ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.


Stay up to date on all the latest ಕ್ರಿಕೆಟ್ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp