2ನೇ ಟೆಸ್ಟ್: ಮೊದಲ ದಿನದಾಟ ಅಂತ್ಯ, 85 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡ ಲಂಕಾ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ - ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಅಂತ್ಯವಾಗಿದ್ದು, ಶ್ರೀಲಂಕಾ ಆರು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. 

Published: 12th March 2022 10:41 PM  |   Last Updated: 12th March 2022 11:19 PM   |  A+A-


2ndtest

ಭಾರತ ತಂಡ

Online Desk

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ - ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಅಂತ್ಯವಾಗಿದ್ದು, ಶ್ರೀಲಂಕಾ ಆರು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. 

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್ ಗಳಿಸಿದ್ದು, ಇಂದು ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ, ಏಂಜೆಲೊ ಮ್ಯಾಥ್ಯೂಸ್ 85 ಎಸೆತಗಳಲ್ಲಿ 43 ರನ್ ಗಳಿಸುವುದರೊಂದಿಗೆ ಹೆಚ್ಚು ಸ್ಕೋರ್ ಮಾಡಿದರು.

ಇದನ್ನು ಓದಿ: 2ನೇ ಟೆಸ್ಟ್: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಟೀಂ ಇಂಡಿಯಾಗೆ ಆರಂಭಿಕ ಆಘಾತ

ಮೊದಲ ಇನ್ನಿಗ್ಸ್ ದಿನದಾಟದ ಅಂತ್ಯದವರೆಗೂ ನಿರೋಶನ್ ಡಿಕ್ವೆಲ್ಲಾ 13 ರನ್ ಗಳಿಸಿ ಆಡುತ್ತಿದ್ದು, ಎಂಬಲ್ಡೆನಿಯಾ ಇನ್ನೂ ಖಾತೆ ತೆರೆದಿಲ್ಲ.

ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು. ಶ್ರೀಲಂಕಾ 166 ರನ್‌ಗಳ ಹಿನ್ನಡೆಯಲ್ಲಿದೆ.

ಇದಕ್ಕು ಮುನ್ನ ಶ್ರೇಯಸ್ ಅಯ್ಯರ್ ಅವರು ಸಿಡಿಸಿದ 92 ರನ್ ಗಳ ಸಹಾಯದಿಂದ ಭಾರತ, ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 59.1 ಓವರ್ ಗಳಲ್ಲಿ 252 ರನ್ ಗಳಿಸಿ ಆಲೌಟ್ ಆಗಿದೆ.

ಮೊದಲು ಶ್ರೀಲಂಕಾ ಬೌಲರ್‌ಗಳು ಭಾರತವನ್ನು 60 ಓವರ್‌ಗಳಲ್ಲಿ ಔಟ್ ಮಾಡಿದರು. ಇದಾದ ನಂತರ ಭಾರತದ ಬೌಲರ್‌ಗಳು ಶ್ರೀಲಂಕಾದ ಆರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಪಂದ್ಯದ ಮೊದಲ ದಿನ ಒಟ್ಟು 16 ವಿಕೆಟ್‌ಗಳು ಪತನಗೊಂಡಿದ್ದು, 338 ರನ್‌ಗಳು ದಾಖಲಾಗಿವೆ. ಮೊದಲ ದಿನದಾಟದ ಅಂತ್ಯದ ನಂತರ ಪಂದ್ಯದಲ್ಲಿ ಭಾರತದ ಹಿಡಿತ ಬಲಗೊಂಡಿದ್ದು, ಸುಮಾರು ಮೂರು ದಿನಗಳಲ್ಲಿ ಈ ಟೆಸ್ಟ್ ಕೂಡ ಅಂತ್ಯಗೊಳ್ಳಬಹುದು ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ದಿನವೇ ವಿಕೆಟ್‌ಗಳು ಬಿದ್ದ ರೀತಿ ನೋಡಿದ್ರೆ ಪಂದ್ಯ ಮೂರೇ ದಿನದಲ್ಲಿ ಮುಗಿಯುವ ಲಕ್ಷಣ ಕಾಣುತ್ತಿದೆ. ಭಾರತ ನೀಡಿದ 252 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಭಾರತ 166 ರನ್‌ಗಳ ಮುನ್ನಡೆ ಹೊಂದಿದ್ದು, ಶ್ರೀಲಂಕಾದ ಕೊನೆಯ ನಾಲ್ಕು ವಿಕೆಟ್‌ಗಳು ಬಾಕಿ ಉಳಿದಿವೆ.

ಭಾರತದ ಆಕ್ರಮಣಕಾರಿ ಬ್ಯಾಟಿಂಗ್
ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಟೀಂ ಇಂಡಿಯಾದ ಆರಂಭ ವಿಶೇಷವಾಗಿರಲಿಲ್ಲ. 10 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಪತನವಾಯಿತು. ನಾಲ್ಕು ರನ್ ಗಳಿಸಿದ್ದಾಗ ಮಯಾಂಕ್ ಅಗರ್ವಾಲ್ ರನೌಟ್ ಆದರು. ಇದಾದ ಬಳಿಕ ನಾಯಕ ರೋಹಿತ್ 29 ರನ್ ಗಳಿಸಿ ಔಟಾದರು. ಇದಾದ ನಂತರವೂ ಭಾರತ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಶ್ರೇಯಸ್ ಅಯ್ಯರ್ ಒಂದು ತುದಿಯಲ್ಲಿ ಆಕ್ರಮಣಕಾರಿಯಾಗಿ ಸ್ಕೋರ್ ಮಾಡಿದರು. 98 ಎಸೆತಗಳಲ್ಲಿ 92 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ ಪಂತ್ 39 ರನ್ ಗಳಿಸಿದರು.

ಈ ಪಂದ್ಯದಲ್ಲಿ, ಮೊದಲ ದಿನದಿಂದಲೇ ಸ್ಪಿನ್ ಬೌಲರ್‌ಗಳಿಗೆ ಪಿಚ್ ಸಾಕಷ್ಟು ನೆರವು ನೀಡುತ್ತಿದೆ. ಭಾರತದ ಎಂಟು ವಿಕೆಟ್‌ಗಳು ಸ್ಪಿನ್ ಬೌಲರ್‌ಗಳ ದಾಳಿಗೆ ಬಿದ್ದರೆ, ವೇಗದ ಬೌಲರ್‌ಗಳು ಕೇವಲ ಒಂದು ವಿಕೆಟ್ ಪಡೆದರು. ಮತ್ತೊಬ್ಬ ಬ್ಯಾಟ್ಸ್‌ಮನ್ ರನೌಟ್ ಆದರು. ಶ್ರೀಲಂಕಾ ಪರ ಲಸಿತ್ ಇಂಬುಲ್ಡೆನಿಯಾ ಮತ್ತು ಪ್ರವೀಣ್ ಜಯವಿಕ್ರಮ ತಲಾ ಮೂರು ವಿಕೆಟ್ ಪಡೆದರು. ಮತ್ತೊಂದೆಡೆ ಧನಂಜಯ್ ಡಿ ಸಿಲ್ವಾ, ಸುರಂಗ ಲಕ್ಮಲ್ ತಲಾ ಒಂದೊಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಶ್ರೀಲಂಕಾ ಒಟ್ಟು 59.1 ಓವರ್‌ಗಳನ್ನು ಬೌಲ್ ಮಾಡಿತು, ಆದರೆ ವೇಗದ ಬೌಲರ್‌ಗಳು ಕೇವಲ 11 ಓವರ್‌ಗಳನ್ನು ಬೌಲ್ ಮಾಡಿದರು. ಮತ್ತೊಂದೆಡೆ ಸ್ಪಿನ್ ಬೌಲರ್‌ಗಳು 48.1 ಓವರ್‌ಗಳಲ್ಲಿ ಎಂಟು ವಿಕೆಟ್ ಪಡೆದರು.

ಇನ್ನೊಂದೆಡೆ ಭಾರತದ ಪರ ವೇಗದ ಬೌಲರ್ ಬುಮ್ರಾ ಮೂರು ಮತ್ತು ಶಮಿ ಎರಡು ವಿಕೆಟ್ ಪಡೆದರು. ಇದಾದ ಬಳಿಕ ಅಕ್ಷರ್ ಪಟೇಲ್ ಕೂಡ ಶ್ರೀಲಂಕಾ ತಂಡಕ್ಕೆ ಹೊಡೆತ ನೀಡಿದರು. ಎರಡು ರನ್ ಗಳಿಸುವಷ್ಟರಲ್ಲಿ ಶ್ರೀಲಂಕಾದ ಮೊದಲ ವಿಕೆಟ್ ಪತನವಾಯಿತು. ಇದಾದ ಬಳಿಕ 14 ರನ್‌ಗಳಿಗೆ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದರು. 28 ರನ್‌ಗಳಿಗೆ ನಾಲ್ಕನೇ ವಿಕೆಟ್ ಪತನಗೊಂಡರೆ ಅರ್ಧದಷ್ಟು ಶ್ರೀಲಂಕಾ ತಂಡವು 50 ರನ್‌ ಗಳಿಸುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿತು. ಮ್ಯಾಥ್ಯೂಸ್ ಬಿಟ್ಟರೆ ಉಳಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಹಾದಿ ತುಳಿದರು. ಮ್ಯಾಥ್ಯೂಸ್ 43 ರನ್ ಗಳಿಸಿ ಔಟಾದರು.


Stay up to date on all the latest ಕ್ರಿಕೆಟ್ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp