ಐಪಿಎಲ್ 2022: ಹಾರ್ದಿಕ್ ಪಾಂಡ್ಯ ಹೊಸ ಅವತಾರ, 'ಬಾಂಬ್ ತಜ್ಞ'!
ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2022 (ಐಪಿಎಲ್ 2022) ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಕ್ರಿಕೆಟ್ ಲೀಗ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
Published: 12th March 2022 05:59 PM | Last Updated: 12th March 2022 06:13 PM | A+A A-

ಹಾರ್ದಿಕ್ ಪಾಂಡ್ಯ
ನವದೆಹಲಿ: ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2022 (ಐಪಿಎಲ್ 2022) ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಕ್ರಿಕೆಟ್ ಲೀಗ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಮಾರ್ಚ್ 26ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಕೊಂಡಿದೆ. ಇದರ ಅಂತಿಮ ಪಂದ್ಯ ಮೇ 29 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಸಾಕಷ್ಟು ಹೊಸತನಗಳನ್ನು ಬದಲಾವಣೆಗಳನ್ನು ಕಾಣುವಿರಿ, ಈ ವರ್ಷ ಎರಡು ಹೊಸ ತಂಡಗಳು ಐಪಿಎಲ್ನಲ್ಲಿ ಆಡುವುದನ್ನು ಕಾಣಬಹುದು.
ಆದಾಗ್ಯೂ, ಈ ಮಧ್ಯೆ ಐಪಿಎಲ್ 2022 ರ ಹೊಸ ಪ್ರೋಮೋ ವೀಡಿಯೊ ಇದೀಗ ಹೊರಹೊಮ್ಮಿದೆ, ಇದರಲ್ಲಿ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶದ ಮೊದಲ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಕೂ ಅಪ್ಲಿಕೇಶನ್ನಲ್ಲಿನ ವೀಡಿಯೊ ಕಡಿಮೆ ಸಮಯದಲ್ಲೇ ಸಾಕಷ್ಟು ಸದ್ದು ಮಾಡುತ್ತಿದೆ. #pandyapromo ಮತ್ತು #iplpromo ಎಂಬ ಹ್ಯಾಶ್ಟ್ಯಾಗ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯವನ್ನು ಬಾಂಬ್ ತಜ್ಞ ಎಂದು ತೋರಿಸಲಾಗಿದೆ, “ಹೊಸದನ್ನು ಎಂದಿಗೂ ಕಡೆಗಣಿಸಬೇಡಿ. ಹೊಸದನ್ನು ಕತ್ತರಿಸಿದಾಗಲೆಲ್ಲಾ 100ರ ತನಕ ಹೋಗುತ್ತದೆ. ಇದಾದ ನಂತರ ತಂಡದ ಸದಸ್ಯರು ಮಾತನಾಡಿ, ಸರಿಯಾಗಿಯೇ ಹೇಳಿದಿರಿ ಸಾರ್ ' ಎಂದು ವಿಡಿಯೋದಲ್ಲಿದೆ.
ಇದನ್ನು ಓದಿ: ಐಪಿಎಲ್ 2022: ಆರ್ ಸಿಬಿಯ ನೂತನ ನಾಯಕನಾಗಿ ಫಾಫ್ ಡು ಪ್ಲೆಸಿಸ್ ನೇಮಕ!
ವಾಸ್ತವವಾಗಿ, ಈ ವೀಡಿಯೊ ಐಪಿಎಲ್ನ ಪ್ರೋಮೋ ಆಗಿದ್ದು, ಇದರಲ್ಲಿ ಎರಡು ಹೊಸ ತಂಡಗಳನ್ನು ಸೇರಿಸಿದ ನಂತರ ಈಗ ಅದು 10 ತಂಡಗಳಾಗಿ ಮಾರ್ಪಟ್ಟಿದೆ. ಈ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ, ಐಪಿಎಲ್ನ ಹೊಸ ಋತುವಿನಲ್ಲಿ ಏನು ಸ್ಫೋಟಗೊಳ್ಳಲಿದೆ ಎಂಬುದನ್ನು ಪಾಂಡ್ಯ ವಿವರಿಸಿದ್ದಾರೆ.
ಸ್ಥಳೀಯ ಸಾಮಾಜಿಕ ಜಾಲತಾಣ ಕೂ ಆಪ್ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಹೇಳಲಾದ ಮುಖ್ಯ ವಿಷಯವೆಂದರೆ, ಈಗ ಎಂಟು ತಂಡಗಳ ಬದಲಿಗೆ 10 ತಂಡಗಳನ್ನು ಸೇರಿಸಲಾಗಿದ್ದು, ಈ ಚುಟುಕು ಆಟ ಹೆಚ್ಚು ರೋಮಾಂಚನ ಮೂಡಿಸುತ್ತದೆ.