ಭಾರತ-ಶ್ರೀಲಂಕಾ 2ನೇ ಟೆಸ್ಟ್: ಜಸ್ಪ್ರೀತ್ ಬೂಮ್ರಾಗೆ ಐದು ವಿಕೆಟ್, 109 ರನ್ ಗಳಿಗೆ ಲಂಕಾ ಆಲೌಟ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಮೊದಲ ಬಾರಿಗೆ ತವರಿನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಐದು ವಿಕೆಟ್ ಕಬಳಿಸಿದರು.
Published: 13th March 2022 03:37 PM | Last Updated: 13th March 2022 03:37 PM | A+A A-

ಜಸ್ಪ್ರೀತ್ ಬೂಮ್ರಾ
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಮೊದಲ ಬಾರಿಗೆ ತವರಿನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಐದು ವಿಕೆಟ್ ಕಬಳಿಸಿದರು.
ಶ್ರೀಲಂಕಾದ ವಿಕೆಟ್ ಕೀಪರ್- ಬ್ಯಾಟರ್ ನಿರೊಶಾನ್ ದಿಕ್ ವೆಲಾ ಅವರನ್ನು 21 ರನ್ ಗಳಿಗೆ ಔಟ್ ಮಾಡುವ ಮೂಲಕ ಬೂಮ್ರಾ ಈ ಸಾಧನೆ ಮಾಡಿದರು. ಈ ಹಿಂದೆ ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಬೂಮ್ರಾ ಐದು ವಿಕೆಟ್ ಸಾಧನೆ ಮಾಡಿದ್ದರು.
ಜಸ್ಪ್ರೀತ್ ಬೂಮ್ರಾ ಅವರ ಮಾರಕ ದಾಳಿಯಿಂದಾಗಿ ಲಂಕಾ ಮೊದಲ ಇನ್ಸಿಂಗ್ಸ್ ನಲ್ಲಿ 109 ರನ್ ಗಳಿಗೆ ಆಲೌಟ್ ಆಯಿತು. ಬೂಮ್ರಾ ಹೊರತುಪಡಿಸಿದಂತೆ ಮೊಹಮ್ಮದ್ ಶಮಿ, ಆರ್. ಅಶ್ವಿನ್ ತಲಾ 2 ವಿಕೆಟ್, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ 10 ಓವರ್ ಗಳ ನಂತರ ಯಾವುದೇ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸುವುದರೊಂದಿಗೆ 180ರನ್ ಗಳ ಮುನ್ನಡೆ ಸಾಧಿಸಿದೆ.